ಉಜಿರೆ : ಉಜಿರೆ ಗ್ರಾಮದ ಮಲೆಬೆಟ್ಟು ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಉದ್ಭವ ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೆ ಉಜಿರೆ ಶ್ರೀ ಯು. ವಿಜಯರಾಘವ ಪಕ್ವೆಟ್ಟಾಯರ ಶುಭಾಶೀರ್ವಾದಗಳೊಂದಿಗೆ ಫೆ. 12 ಶುಕ್ರವಾರ ನಡೆಯಿತು.
ಆಲಪಾಡಿ ಶ್ರೀ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ, ದೇವಳದ ಪ್ರಧಾನ ಅರ್ಚಕರಾದ ಶ್ರೀಕಾಂತ್ ರಾವ್ ಇವರ ಸಭಾಪತಿಯಲ್ಲಿ ವಿವಿಧ ವೈಧಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶ್ರೀ ಮಹಾಗಣಪತಿ ದೇವರಿಗೆ ಬೆಳಗ್ಗೆ ತೋರಣ ಮುಹೂರ್ತ, ಗಣಪತಿ ಹೋಮ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ಮತ್ತು ರಾತ್ರಿ ರಂಗಪೂಜೆ ನಡೆಯಿತು. ಶ್ರೀ ಸುಬ್ರಹ್ಮಣೇಶ್ವರ ದೇವರಿಗೆ ಬೆಳಗ್ಗೆ ತೋರಣ ಮುಹೂರ್ತ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ಮತ್ತು ರಾತ್ರಿ ರಂಗಪೂಜೆ ಸೇವೆ ಸಲ್ಲಿಸಲಾಯಿತು, ನಾಗ ದೇವರಿಗೆ ಅಭಿಷೇಕ ಮತ್ತು ನಾಗಪರ್ವ ಪೂಜೆ ಸಮರ್ಪಿಸಲಾಯಿತು. ಸಂಜೆ ವಿವಿಧ ಭಜನಾ ಮಂಡಳಿಗಳಿಂದ ನೃತ್ಯ ಭಜನಾ ಕಾರ್ಯಕ್ರಮ ನೆರವೇರಿದ ಬಳಿಕ ಕಾಳರಾತ್ರಿ ದೈವದ ನೇಮೋತ್ಸವ ನಡೆಯಿತು. ಪ್ರತಿಷ್ಠಾ ಮಹೋತ್ಸವದಲ್ಲಿ ಪಾಲ್ಗೊಂಡೊದ್ದ ಭಕ್ತಾಧಿಗಳಿಗೆ ಸಾರ್ವಜನಿಕ ಅನ್ನಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಿದ ಭಕ್ತರನ್ನು ಮತ್ತು ಅನ್ನದಾನಕ್ಕೆ ಸಹರಿಸಿದ ದಾನಿಗಳನ್ನು ಗೌರವಿಸಲಾಯಿತು.
ವಿಧಾನಪರಿಷತ್ ಸದಸ್ಯರಾದ ಶ್ರೀ ಹರೀಶ್ ಕುಮಾರ್, ಉಜಿರೆಯ ಶ್ರೀ ಜಿ. ಪ್ರಭಾತ್ ಭಟ್, ಶ್ರೀ ಸೂರಜ್ ಅಡೂರ್, ಮೊದಲಾದ ಗಣ್ಯರು ಹಾಗೂ ಊರಿನ-ಪರವೂರಿನ ಭಕ್ತರು, ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಪಾಲ್ಗೊಂಡು ದೇವರ ದರ್ಶನ ಪಡೆದರು.