ಉಜಿರೆ: ಮಾಚಾರು ಕೋರ್ಯಾರುಗುತ್ತು ಶ್ರೀ ವ್ಯಾಘ್ರಚಾಮುಂಡೇಶ್ವರಿ ದೈವಸ್ಥಾನ ಪ್ರತಿಷ್ಠಾ ಮಹೋತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಮಾಚಾರು ಕೋರ್ಯಾರುಗುತ್ತು ಶ್ರೀ ವ್ಯಾಘ್ರಚಾಮುಂಡೇಶ್ವರಿ ದೈವಸ್ಥಾನ ಪ್ರತಿಷ್ಠಾ ಮಹೋತ್ಸವ ಹಾಗೂ ವರ್ಷಾವಧಿ ದಪಂಪದ ಬಲಿ ಉತ್ಸವಕ್ಕೆ ಇಂದು(ಫೆ.16) ಚಾಲನೆ ದೊರೆತಿದ್ದು, ಫೆ.17ರ ವರೆಗೆ ನಡೆಯಲಿದೆ.

ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಫೆ.15ರಂದು ಕೋರ್ಯಾರು ಬೈಲು ಹತ್ತು ಸಮಸ್ತರು, ಮಣಿಕ್ಕೆ, ಕಾಶಿಬೆಟ್ಟು, ಮೇಲಿನ ಮಾಚಾರು ಭಕ್ತಾಧಿಗಳು ಮೆರವಣಿಗೆ ಮೂಲಕ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಇಂದು ಬೆಳಿಗ್ಗೆ 8ರಿಂದಲೇ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಂಡಿದ್ದು, ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಕಂಕಣ ಬಂಧನ, ಶಿಲ್ಪಿಗಳ ಆಲಯ ಪರಿಗ್ರಹ, ಆಚಾರ್ಯ ವರಣ, 24 ನಾಳಿಕೇರ ಗಣಯಾಗ ನಡೆಯಿತು. ನಂತರ ಉಜಿರೆ ಶ್ರೀಜನಾರ್ದನ ಸ್ವಾಮಿ ದೇವಸ್ಥಾನದಿಂದ ಪ್ರಾರಂಭಗೊಂಡ ಹೊರೆ ಕಾಣಿಕೆ ಮೆರವಣಿಗೆ ಉಜಿರೆ, ಚಾವಡಿ, ಮಲೆಬೆಟ್ಟು, ಕಿರಿಯಾಡಿ, ಓಡಲ ಮೂಲಕ ಸಾಗಿ ದೇವಳವನ್ನು ತಲುಪಿತು.

ಪ್ರತಿಷ್ಠಾ ಮಹೋತ್ಸವ ಹಿನ್ನಲೆ ನೂತನ ಕಛೇರಿಯನ್ನು ನಿರ್ಮಿಸಿದ್ದು, ಇದರ ಉದ್ಘಾಟನೆ ಕಾರ್ಯಕ್ರಮವನ್ನು ಬೆನಕ ಕನ್ ಸ್ಟ್ರಕ್ಷನ್ ನ ಗಣೇಶ್ ಇಂಜಿನಿಯರ್ ನೇರವೇರಿಸಿದರು. ಇದಾದ ಬಳಿಕ ನೂತನವಾಗಿ ನಿರ್ಮಿಸಲಾದ ಹಸಿರುವಾಣಿ ಉಗ್ರಾಣ ಉದ್ಘಾಟನೆಯನ್ನು ಕಾರ್ಯಕ್ರಮವು ನೇರವೇರಿದ್ದು, ಉಜಿರೆ ಕಾಮಧೇನು ಹೋಟೆಲ್ ಮಾಲಕ ಮಾಧವ ಹೊಳ್ಳ ಹಸಿರುವಾಣಿ ಉಗ್ರಾಣವನ್ನು ಉದ್ಘಾಟನೆ ಮಾಡಿದರು.  ಹಾಗೇ ಪ್ರತಿಷ್ಠಾ ಮಹೋತ್ಸವದ ಹಿನ್ನಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಅನ್ನ ಛತ್ರ ಉದ್ಘಾಟನೆಯನ್ನು ಉಜಿರೆಯ ಜನಾರ್ದನ ಸ್ವಾಮಿ ದೇವಾಲಯದ ಶರತಕೃಷ್ಣ ಪಡ್ವೆಟ್ನಾಯ  ನೆರವೇರಿಸಿಕೊಟ್ಟರು.

 

ಕೋರ್ಯಾರು ನಾಗಬನದಲ್ಲಿ ಆಶ್ಲೇಷಾ ಬಲಿ, ತಂಬಿಲ ಸೇವೆ ಸ್ಥಳದ ನಾಗನಿಗೆ ನಾಗ ತಂಬಿಲ ಪವಮಾನ ಹೋಮ, ಪ್ರಸನ್ನ ಪೂಜೆ ನಡೆಯಿತು. ಬಳಿಕ ಭಕ್ತಾಧಿಗಳಿಗೆ ಸಾರ್ವಜನಿಕ ಅನ್ನ ಸಂತರ್ಪಣೆ ಮಾಡಲಾಯಿತು.

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.