ಉಜಿರೆ: ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಜಿರೆ, ಇದರ ನೂತನ ವರ್ತಕರ ಸಂಘ ಕಛೇರಿಯ ಉದ್ಘಾಟನೆ ಕಾರ್ಯಕ್ರಮ ಫೆ.16ರಂದು ನಡೆಯಿತು.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಶಾಸಕ ಹರೀಶ್ ಪೂಂಜ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಇದರ ಉದ್ಘಾಟನೆ ನೇರವೇರಿಸಿ ಶುಭ ಹಾರೈಸಿದರು. ಇದೇ ವೇಳೆ ವರ್ತಕರ ಸಂಘದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಉದ್ಯಮಿ ಪಾಡುರಂಗ ಬಾಳಿಗ ವರ್ತಕರ ಸಂಘದ ಕಛೇರಿಯ ಉದ್ಘಾಟಿಸಿದರು.
ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಕೆ. ಅರವಿಂದ ಕಾರಂತ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಉಜಿರೆ ಶ್ರೀಜನಾರ್ದನ ಸ್ವಾಮಿ ದೇವಸ್ಥಾನದ ಶರತ್ ಕೃಷ್ಣ ಪಡ್ವೆಟ್ನಾಯ, ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಕಾನೂನು ಸಲಹೆಗಾರ ಧನಂಜಯ ರಾವ್, ಹಿರಿಯ ವರ್ತಕರಾದ ಸಬ್ರಾಯ ಶೆಣೈ, ಪುತ್ತುಮೋನು, ಹೆರಾಲ್ಡ್ ಡಿ’ಸೋಜಾ, ಉಜಿರೆ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ಗ್ರಾ.ಪ. ಉಪಾಧ್ಯಕ್ಷ ರವಿ ಬರಮೇಲು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ವತಿಯಿಂದ ಹಿರಿಯ ವರ್ತಕರಾದ ಉಜಿರೆ ಸಂಧ್ಯಾ ಟ್ರೇಡರ್ಸ್ ನ ರಾಧಾಕೃಷ್ಣ ಪೈ, ಪ್ರಭಾತ್ ಪ್ರಾವಿಜನ್ ಸ್ಟೋರ್ ನ ಪ್ರಭಾತ್ ಭಟ್, ಶ್ರೀ ದುರ್ಗಾ ಫರ್ನಿಚರ್ಸ್ ನ ಸದಾಶಿವ ಶೆಟ್ಟಿ, ಧನಲಕ್ಷ್ಮೀ ಜುವೆಲ್ಲರ್ ನ ಬಾಲಕೃಷ್ಣ ಆಚಾರ್ಯ, ಪದ್ಮಶ್ರೀ ಉಜಿರೆಯ ಪದ್ಮನಾಭ ಶೆಟ್ಟಿಗಾರ್, ಉಜಿರೆ ಬೆಡ್ ಮಾರ್ಟ್ ನ ಹಮೀದ್ ಯು.ಎ, ಶ್ರೀ ಗಣೇಶ್ ಹೊಟೇಲ್ ನ ಜ್ಯೋತಿ ಪ್ರಭಾತ್ ಪ್ರಭು, ಭಾಸ್ಕರ ಆಚಾರ್ಯ, ಶ್ರೀ ಜನಾರ್ದನ ಗ್ಯಾರೇಜ್ ನ ಬಾಲಕೃಷ್ಣ ಶೆಟ್ಟಿ, ರಾಘವೇಂದ್ರ ಪ್ರಿಂಟರ್ಸ್ ನ ಸಂಜೀವ ಕೆ., ಜ್ಯೋತಿ ಸೈಕಲ್ ವರ್ಕ್ಸ್ ನ ಭದ್ರಯ್ಯ ನಾಯ್ಕ, ಉಜಿರೆ ಸೈಕಲ್ ವರ್ಕ್ಸ್ ನ ಹಂಝ, ಉಜಿರೆ ದ್ವಿಚಕ್ರ ವಾಹನ ಫೆಲಿಕ್ಸ್ ವೇಗಸ್, ಉಜಿರೆಯ ಶೇಷಗಿರಿ ಶೆಣೈ, ಉಜಿರೆ ಜನರಲ್ ಸ್ಟೋರ್ ನ ಲಕ್ಷ್ಮೀಧರ್ ಇಂದ್ರ, ಉಜಿರೆ ಹೇರ್ ಡ್ರೆಸರ್ಸ್ ನ ಶ್ರೀಸಂಜೀವ ಭಂಡಾರಿ ರವರನ್ನು ಸನ್ಮಾಸಲಾಯಿತು.
ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಕಾರ್ಯದರ್ಶಿ ಲಕ್ಷ್ನಣ ಗೌಡ ಹಾಗೂ ಕೋಶಾಧಿಕಾರಿ ಅಬೂಬಕ್ಕರ್, ಕಾರ್ಯಕಾರಿ ಮಂಡಳಿ ಸಮಿತಿ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶ್ವಸಿಗೆ ಕಾರಣೀಣಭೂತರಾದರು.