ಬೆದ್ರಡ್ಡ-ದೈಪಾಲಬೆಟ್ಟುರಸ್ತೆ ಕಾಂಕ್ರಿಟೀಕರಣ ಪೂರ್ಣ: ಅನುದಾನ ಮಂಜೂರು ಮಾಡಿದ ಶಾಸಕರಿಗೆ ಗ್ರಾಮಸ್ಥರಿಂದ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮೂಡುಕೋಡಿ: ಇಲ್ಲಿಯ ಬೆದ್ರಡ್ಡ ದೈಪಾಲಬೆಟ್ಟು ರಸ್ತೆಯು ತೀರಾ ಹದಗೆಟ್ಟಿದ್ದು ಪಾದಾಚಾರಿಗಳಿಗೆ, ವಾಹನ ಸವಾರರಿಗೆ ಸಂಚಾರಕ್ಕೆ ತೊಂದರೆಯುಂಟಾಗಿತ್ತು. ಕೆಲವು ತಿ೦ಗಳುಗಳ ಹಿ೦ದೆ ಶಾಸಕ ಹರೀಶ್ ಪೂ೦ಜರವರು ಖಾಸಗಿ ಕಾರ್ಯಕ್ರಮ ನಿಮಿತ್ತ ಮೂಡುಕೋಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೆದ್ರಡ್ಡ ದೈಪಾಲಬೆಟ್ಟು ರಸ್ತೆಯ ದುರಸ್ತಿ ಬಗ್ಗೆ  ನೀರು ನೈರ್ಮಲ್ಯ  ಸಮಿತಿಯ ಸದಸ್ಯ ಅನೂಪ್ ಜೆ ಪಾಯಸ್ ನೇತೃತ್ವದಲ್ಲಿ  ಧರ್ಮರಾಜ್, ಪ್ರಶಾಂತ್ ಗೌಡ ,ರಮೇಶ್ ಪೂಜಾರಿ, ನಿಖಿಲ್ ಡಿ ಶೆಟ್ಟಿ ಅವರ ನಿಯೋಗ, ಉಪಾಧ್ಯಕ್ಷ ಅರುಣ್ ಕ್ರಾಸ್ತ, ಸಿ.ಎ ಬ್ಯಾಂಕ್ ಅಧ್ಯಕ್ಷ ಸು೦ದರ ಹೆಗ್ಡೆ ಬಿ.ಇ ಅವರ ಸಮ್ಮುಖದಲ್ಲಿ ಶಾಸಕರಿಗೆ ಮನವಿ ನೀಡಲಾಗಿತ್ತು. ಮನವಿಯನ್ನು ಪರಿಶೀಲಿಸಿದ ಶಾಸಕರು ತಕ್ಷಣ ಈ ರಸ್ತೆಯ ಸ೦ಪೂಣ೯ ಕಾ೦ಕ್ರೀಟಿಕರಣಕ್ಕೆ ರೂ.60 ಲಕ್ಷ  ಅನುದಾನ ಮ೦ಜೂರು ಮಾಡಿ ಸ್ಥಳದಲ್ಲಿಯೇ ಆದೇಶ ನೀಡಿದ್ದರು.

ಇದೀಗ ಕಾಮಗಾರಿ ಪೂಣ೯ಗೊ೦ಡಿದ್ದು ದೈಪಾಲಬೆಟ್ಟು ದೈವಸ್ಥಾನದ ಜಾತ್ರೋತ್ಸವಕ್ಕೆ ಅದೇ ಮಾರ್ಗವಾಗಿ ಬ೦ದ ಶಾಸಕ ಹರೀಶ್ ಪೂ೦ಜರವರನ್ನು ಸಮಸ್ತ ಗ್ರಾಮಸ್ಥರ ಪರವಾಗಿ ಸಿ.ಎ ಬ್ಯಾಂಕ್ ಅಧ್ಯಕ್ಷ ಸು೦ದರ ಹೆಗ್ಡೆ ಸನ್ಮಾನಿಸಿದರು ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ರವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು

ಈ  ಸಂದರ್ಭದಲ್ಲಿ ವೇಣೂರು ಗ್ರಾ. ಪ೦. ಸದಸ್ಯ ಹರೀಶ್ ಪಿ .ಎಸ್, ನೀರು ನೈಮ೯ಲ್ಯ ಸಮಿತಿಯ ಅನೂಪ್ ಜೆ ಪಾಯಸ್, ಸ್ಥಳೀಯರಾದ ನಾಗೇಶ್ ಶೆಟ್ಟಿ ಡಿ, ಉಮೇಶ್ ನಡ್ತಿಕಲ್ಲು,ರಾಮ್ ಪ್ರಸಾದ್ ಮರೋಡಿ, ಹರಿಣ್ ಸುವರ್ಣ ಬಜಿರೆ, ನಿತೀಶ್ ಗು೦ಡೂರಿ, ಧರ್ಮರಾಜ್ ಕೊಪ್ಪದ ಬಾಕಿಮಾರು, ನಮಿರಾಜ ಆರಿಗ, ಪ್ರಶಾಂತ್ ಗೌಡ, ಪ್ರಕಾಶ್ ಹೆಗ್ಡೆ, ನಿಖಿಲ್ ಶೆಟ್ಟಿ, ಸತೀಶ್ ಪಿ, ಎನ್ ಚ೦ದ್ರಶೇಖರ್ ಕೊಪ್ಪದಬಾಕಿಮಾರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.