ವೇಣೂರು: ಶ್ರೀರಕ್ಷಾ ಗ್ರಾಮೀಣಾಭಿವೃದ್ಧಿ ಒಕ್ಕೂಟ ಮಂಗಳೂರು, ಕರ್ನಾಟಕ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ (ಫೆವಾರ್ಡ್-ಕ) ದಕ್ಷಿಣ ಕನ್ನಡ ಇವರ ಜಂಟಿ ಆಶ್ರಯದಲ್ಲಿ ಧ್ವನಿ ಫೌಂಡೇಶನ್ ಬೆಂಗಳೂರು ಇವರ ಸಹಕಾರದೊಂದಿಗೆ ಉಚಿತ ಟ್ಯಾಬ್ ವಿತರಣಾ ಕಾರ್ಯಕ್ರಮವು ಸರ್ಕಾರಿ ವೇಣೂರು ಪ್ರೌಢಶಾಲೆಯಲ್ಲಿ ಜರಗಿತು.
ಫಲಾನುಭವಿ ವಿದ್ಯಾರ್ಥಿಗಳಾದ ವೇಣೂರು ಪ್ರೌಢಶಾಲೆಯ ಸ್ವಾತಿ ಸಾಠೆ ಮತ್ತು ಅಕ್ಷತಾ ಹಾಗೂ ಸಿದ್ಧಕಟ್ಟೆ ಪ್ರೌಢಶಾಲೆಯ ವಿಕೇಶ್ ಇವರಿಗೆ ಟ್ಯಾಬ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಇದರ ಪ್ರಬಂಧಕ ಶುಭಾಶಯ ಜೈನ್, ಶ್ರೀರಕ್ಷಾ ಗ್ರಾಮೀಣಾಭಿವೃದ್ಧಿ ಒಕ್ಕೂಟ ಮಂಗಳೂರು ಇದರ ಕಾರ್ಯದರ್ಶಿ ಪ್ರಶಾಂತ್, ಉಪ ಪ್ರಾಚಾರ್ಯ ವೆಂಕಟೇಶ್ ಎಸ್. ತುಳುಪುಳೆ, ಹಿರಿಯ ಶಿಕ್ಷಕ ಸುಕೇಶ್ ಕೆ. ಉಪಸ್ಥಿತರಿದ್ದರು. ಶಿಕ್ಷಕ ಶರತ್ ಕುಮಾರ್ ತುಳುಪುಳೆ ನಿರೂಪಿಸಿದರು. ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಹಕರಿಸಿದರು. ಟ್ಯಾಬ್ ವಿಜೇತ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.