ಮರೋಡಿ: ಶ್ರೀ ಕೊಡಮಣಿತ್ತಾಯ ಮತ್ತು ಬ್ರಹ್ಮಬೈದರ್ಕಳ ಗರಡಿ ತಾಳಿಪಾಡಿ ಪಲಾರಗೋಳಿ ಮರೋಡಿ ಪ್ರತಿಷ್ಠಾ ಕಲಶಾಭಿಷೇಕಕ ಅಂಗವಾಗಿ ವಿವಿಧ ವೇಷ ಭೂಷಣಗಳೊಂದಿಗೆ ವಿಜೃಂಭಣೆಯಿಂದ ಹಸಿರುವಾಣಿ ಹೊರಕಾಣಿಕೆ ಮೆರವಣಿಗೆ ನಡೆಯಿತು.
ಶಿರ್ತಾಡಿಯಿಂದ ಆರಂಭಗೊಂಡ ಮೆರವಣಿಗೆಗೆ ಸಮಿತಿ ಗೌರವಧ್ಯಕ್ಷ ಎಂ ನಮಿರಾಜ ಪಾಂಡಿ ಗುಡ್ಡಾನ್ಬೆಟ್ಟು ಹಾಗೂ ಕಲಾಭಿಷೇಕ ಸಮಿತಿ ಗೌರವಾಧ್ಯಕ್ಷ ,ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಡಾ.ಆಶೀರ್ವಾದ್, ಕಲಾಭಿಷೇಕ ಸಮಿತಿ ಅಧ್ಯಕ್ಷ ರತ್ನಾಕರ ಬುಣ್ಣನ್, ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್, ಜಿರ್ಣೋದ್ದಾರ ಸಮಿತಿ ಅಧ್ಯಕ್ಷ ರಾಮ್ ಪ್ರಸಾದ್, ಹೊರಕಾಣಿಕೆ ಸಮಿತಿ ಸಂಚಾಲಕ ಸುರೇಶ್ ಅಂಚನ್ ಅಟ್ಲಬೆಟ್ಟು, ಪ್ರ.ಕಾರ್ಯದರ್ಶಿ ಶಿವಾನಂದ ಆಚಾರ್ಯ,ಕಾರ್ಯದರ್ಶಿ ಸಂತೋಷ್, ರಮೇಶ್, ನಿತೀನ್ ಎಸ್ ಕೋಟ್ಯಾನ್, ಕೋಶಾಧಿಕಾರಿ ರವಿಂದ್ರ ಅಂಚನ್ ಅಟ್ಲಬೆಟ್ಟು,ಉಪ ಕೋಶಾಧಿಕಾರಿ ಅವಿನಾಶ್ ಕೋಟ್ಯಾನ್,ಜಾತ್ರ ಸಮಿತಿ ಅಧ್ಯಕ್ಷ ದಾಮೋಧರ ಪೂಜಾರಿ, ಕಾರ್ಯದರ್ಶಿ ಉಮೇಶ್ ಸಾಲ್ಯಾನ್, ಹಿರಿಯರಾದ ರಾಜು ಪೂಜಾರಿ ಪಿ.ಕೆ, ತಾ.ಪಂ ಸದಸ್ಯ ಸುದೀರ್ ಆರ್ ಸುವರ್ಣ, ರೂಪಾ ರವೀಂದ್ರ,ಕಂಟ್ರಾಕ್ಟರ್ ಪ್ರಶಾಂತ್ ಪ್ರತಿಮಾ ನಿಲಯ, ಅಂಡಿಂಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮೋಹನ್ ಅಂಡಿಂಜೆ, ಸುನೀಲ್ ಕಣಿಯೂರು ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ವೈಭವದ ಮೆರವಣಿಗೆಯಲ್ಲಿ ಕೇರಳ ಚೆಂಡೆ,ನಾಸಿಕ್ ಬ್ಯಾಂಡ್ ಸೆಟ್, ಹನುಮಾನ್ , ವಿವಿಧ ತಂಡಗಳಿಂದ ಕುಣಿತ ಭಜನೆ, ನೃತ್ಯ, ವೀರಗಾಸೆ ಹಾಗೂ ವೇಷ ಭೂಷಣಗಳೊಂದಿಗೆ ಹೊರಕಾಣಿಕೆ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.