ಮಿತ್ತಬಾಗಿಲು: ಉಡುಪಿಯ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯದಲ್ಲಿ ಶರೀರ ರಚನಾ ಸ್ನಾತಕೋತ್ತರ ವಿಭಾಗದ ಸಹಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ನಿತಿನ್ ಕುಮಾರ್ ಅವರಿಗೆ ಡಾಕ್ಟರೇಟ್ ದೊರಕಿದೆ.
ಎ ಕ್ರಿಟಿಕಲ್ ಅನಾಲಿಸಿಸ್ ಆಫ್ ದಿ ಶರೀರ ರಚನಾ ಟರ್ಮಿನೋಲಜೀಸ್ ಇನ್ ಸುಶ್ರುತ ಸಂಹಿತ” (A Critical Analysis of the Shareera Rachana Terminologies in Sushrutha Samhita) ಎಂಬ ವಿಷಯದ ಮೇಲೆ ಡಾ. ಗೋವಿಂದರಾಜು ಯು. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದು, ಅವರು ಮಂಡಿಸಿದ ಮಹಾಸಂಶೋಧನಾ ಪ್ರಬಂಧಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಬೆಂಗಳೂರು) ದಿಂದ ಡಾಕ್ಟರೇಟ್ ಪದವಿ ದೊರಕಿದೆ.
ಡಾ. ನಿತಿನ್ ಕುಮಾರ್ ಆರೂರು ಲಕ್ಷ್ಮೀನಾರಾಯಣ ರಾವ್ ಮೆಮೋರಿಯಲ್ ಆಯುರ್ವೇದ ಮೆಡಿಕಲ್ ಕಾಲೇಜು, ಕೊಪ್ಪ ಇಲ್ಲಿ ಆಯುರ್ವೇದ ಪದವಿ ಪಡೆದಿದ್ದು, ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ದಿಂದ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದಿದ್ದಾರೆ. ಡಾ. ನಿತಿನ್ ಕುಮಾರ್ ಅವರು ಮಿತ್ತಾಬಾಗಿಲು ಶಾಂತಿನಿಕೇತನ ಶ್ರೀ ನಿರ್ಮಲ್ ಕುಮಾರ್ ಶೆಟ್ಟಿ ಮತ್ತು ಶ್ರೀಮತಿ ಶಕುಂತಳ ಎನ್. ಶೆಟ್ಟಿ ದಂಪತಿಯವರ ಪುತ್ರನಾಗಿರುತ್ತಾರೆ.