ಉಜಿರೆ: ಇಲ್ಲಿಯ ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಪುನಃ ಪ್ರತಿಷ್ಠಾ ಮಹೋತ್ಸವ ಫೆ.13 ರಿಂದ 15 ರವರೆಗೆ ವಿಜೃಂಭಣೆಯಿಂದ ನಡೆಯುತ್ತಿದ್ದು, ಆ ಪ್ರಯುಕ್ತ ಇಂದು (ಫೆ.15) ವೇದಮೂರ್ತಿ ಶ್ರೀ ಹಿಜಂಕೂರಿ ಶ್ರೀಪತಿ ಯಳಚಿತ್ತಾಯ ರವರ ನೇತೃತ್ವದಲ್ಲಿ ನೂತನ ಶ್ರೀ ಸಿದ್ಧಿವಿನಾಯಕ ದೇವರ ರಜತ ಶಿಖರ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, 48ನಾಳಿಕೇರ ಯಾಗ , ಪಂಚಾಮೃತ ಅಭಿಷೇಕ 108ಪರಿಕಲಶ ಬ್ರಹ್ಮಕಲಶಾಭಿಷೇಕ ಜರುಗಿತು.
ಈ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮವನ್ನು ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್ ಉದ್ಘಾಟಿಸಿದರು. ಪುನಃ ಪ್ರತಿಷ್ಠಾ ಮಹೋತ್ಸವ ಸಮಿತಿಯ ಅಧ್ಯಕ್ಷ ಶರತ್ಕೃಷ್ಣ ಪಡ್ವೆಟ್ನಾಯ, ಉಜಿರೆ ಲಕ್ಷ್ಮೀಗ್ರೂಪ್ಸ್ ಮಾಲಕ ಮೋಹನ್ ಕುಮಾರ್ ಗೌರವ ಉಪಸ್ಥಿತರಿದ್ದರು. ಡಾ| ಪ್ರದೀಪ್ ನಾವೂರು ಧಾರ್ಮಿಕ ಉಪನ್ಯಾಸ ನೀಡಿದರು.
ಕಾರ್ಯಾಧ್ಯಕ್ಷ ವಿಶ್ವನಾಥ ನೇಕಾರ ಕಕ್ಕರಬೆಟ್ಟು, ಕಾರ್ಯದರ್ಶಿ ಸಂತೋಷ್ ಕುಮಾರ್, ಕೋಶಾಧಿಕಾರಿ ಹರಿಪ್ರಸಾದ ನೇಕಾರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಬಾಲಕೃಷ್ಣ ಗೌಡ, ಪ್ರಧಾನ ಕಾರ್ಯದರ್ಶಿ ಹರೀಶ್ ನೇಕಾರ, ಕೋಶಾಧಿಕಾರಿ ಬಿ. ರಾಮದಾಸ ಭಂಡಾರ್ಕರ್, ಕಾರ್ಯಾಧ್ಯಕ್ಷ ರಾಜಪ್ಪ ನೇಕಾರ, ಪುನಃ ಪ್ರತಿಷ್ಠಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದು,ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.