ಕೊಕ್ಕಡ: ಇಲ್ಲಿಯ ಸೌತಡ್ಕ ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ 108 ಕಾಯಿ ಗಣಹೋಮ ಫೆ.15 ರಂದು ಬೆಳಿಗ್ಗೆ ಜರುಗಿತು. ಈ ಸಂದರ್ಭದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಇಂದು (ಫೆ.15) ಸಂಜೆ ದಾಸ ಸಂಕೀರ್ತನಕಾರರಾದ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ದಾಸ ಭಕ್ತಿ ಗಾನಾಮೃತ, ರಾತ್ರಿ ಶ್ರೀ ಮಹಾಗಣಪತಿ ದೇವರಿಗೆ ಮೂಡಪ್ಪ ಸೇವೆ ನಡೆದು ನಂತರ ಶ್ರೀ ಪಂಚಜನ್ಯ ಯಕ್ಷಗಾನ ಕಲಾತಂಡ ನೇರಳಕಟ್ಟೆ ಇವರಿಂದ ಯಕ್ಷಗಾನ ಬಯಲಾಟ ‘ಬೃಗು ಲಾಂಛನ’ ಮತ್ತು ‘ರತಿ ಕಲ್ಯಾಣ’ ಜರುಗಲಿರುವುದು.