ಬೆಳ್ತಂಗಡಿ: ಶ್ರೀಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಮಾಸಿಕ ಸಭೆ ಫೆ.13ರಂದು ಸಂಘದ ಸಭಾ ಭವನದಲ್ಲಿ ಅಧ್ಯಕ್ಷ ಎನ್. ಪದ್ಮನಾಭ ಅವರ ನೇತೃತ್ವದಲ್ಲಿ ನಡೆಯಿತು.
ಈ ವೇಳೆ ಬಿಲ್ಲವ ಸಮಾಜದ ನಾಯಕರುಗಳು ಹಾಗೂ ಆರಾಧಿಸಿಕೊಂಡು ಬಂದಿರುವ ಶಕ್ತಿಗಳ ಬಗ್ಗೆ ಮಾತುನಾಡುವವರ ವಿರುದ್ಧ ಖಂಡನಾ ಕ್ರಮ ತೆಗೆದುಕೊಳ್ಳುವಂತೆ ನಿರ್ಣಯ ತೆಗೆದುಕೊಳ್ಳಲಾಯಿತು.
ಬಿಲ್ಲವ ಸಮುದಾಯ ಎಂದರೆ ನೇರ ನಡೆ – ನುಡಿಯ ಸತ್ಯಸಂಧರ ಹಾಗೂ ಇನ್ನೊಬ್ಬರ ಕಷ್ಟ ಕಾರ್ಪಣ್ಯಗಳಿಗೆ ಅಂಜದೆ ಸಹಾಯ ಮಾಡುವ ಜನಾಂಗ ಎನ್ನುವುದನ್ನು ಎಲ್ಲರು ಮರೆತಂತಿದೆ. ಈ ಗುಣ ಬಿಲ್ಲವ ಸಮುದಾಯದ ದೌರ್ಬಲ್ಯ ಎಂದು ಭಾವಿಸದಂತಿದೆ. ಆದರೆ ಕೋಟಿ ಚೆನ್ನಯರು ತಮ್ಮ ಜೀವನದುದ್ದಕ್ಕೂ ಇನ್ನೊಬ್ಬರ ಕಷ್ಟ ಕಾರ್ಪಣ್ಯಗಳಿಗೆ ಸಹಾಯಕರಾಗಿ ದುಡಿದಿದ್ದರು, ಅಲ್ಲದೇ ಸಮಾಜದ ದುಷ್ಟ ಶಕ್ತಿಗಳ ನಿಗ್ರಹಕರಾಗಿ ತಮ್ಮ ಜೀವನವನ್ನೇ ಬಲಿಕೊಟ್ಟ ವೀರರು. ಇತರೆ ಸಮುದಾಯದವರನ್ನು ಸಹೋದರರಂತೆ ಕಂಡು ಮಾನ ಸಮ್ಮಾನವನ್ನು ಕೊಟ್ಟವರು.
ಆದರೆ ಆ ಸದ್ಗುಣವನ್ನೇ ಬಿಲ್ಲವ ಸಮುದಾಯದ ಜನರ, ನಾಯಕರ ದೌರ್ಬಲ್ಯ ಎಂದು ಬಿಲ್ಲವ ಸಮುದಾಯದ ವಿರುದ್ಧ ಧ್ವನಿ ಎತ್ತುವಂತಾಗಿದೆ. ಆದರೆ ಪ್ರಕೃತ ನಡೆಯುವ ಎಲ್ಲ ವಿಷಯಗಳನ್ನು ತಾಲೂಕಿನ ಬಿಲ್ಲವ ಸಂಘಟನೆಗಳು ಕೂಲಂಕೂಷವಾಗಿ ಗಮಸಿಸುತ್ತಾ ಬಂದಿರುತ್ತದೆ. ಅಲ್ಲದೇ ಈಗಾಗಲೇ ನಡೆದ ಘಟನೆಯನ್ನು ಖಂಡಿಸುತ್ತದೆ. ಬಿಲ್ಲವ ಸಮುದಾಯದ ಹಾಗೂ ನಾಯಕರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿ ಬಿಲ್ಲವ ಸಮುದಾಯದ ಆತ್ಮ ಗೌರವಕ್ಕೆ ಧಕ್ಕೆ ತಂದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾಗಿ ಖಂಡಿಸುವುದರೊಂದಿಗೆ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಜೊತೆಗೆ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಖಂಡನೀಯ ನಿರ್ಣಯ ತೆಗೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರುಗಳಾದ ವಸಂತ್ ಸಾಲಿಯಾನ್ , ಪಿ.ಕೆ ರಾಜು ಪೂಜಾರಿ, ಪೀತಾಂಬರ ಹೇರಾಜೆ, ಯೋಗೀಶ್ ಕುಮಾರ್ ಕೆ.ಎಸ್, ಜಯರಾಮ ಬಂಗೇರ ಹೇರಾಜೆ, ಭಗೀರಥ ಜಿ, ಕಾರ್ಯದರ್ಶಿ ನಾರಾಯಣ ಸುವರ್ಣ, ಕೋಶಾಧಿಕಾರಿ ಎ.ಪಿ.ಎಂ.ಸಿ ಅಧ್ಯಕ್ಷ ಚಿದಾನಂದ ಎಲ್ದಕ್ಕ, ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ರಾಜಶ್ರೀ ರಮಣ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ರಂಜಿತ್ ಹೆಚ್.ಡಿ, ನಿರ್ದೇಶಕರುಗಳಾದ ಜಗದೀಶ್ ಡಿ, ಉಮೇಶ್ ಕುಮಾರ್, ಯುವರಾಜ್ ವೈ, ಜಯಕುಮಾರ್ ನಡ, ಉಮೇಶ್ ಮದ್ದಡ್ಕ, ಯಶೋಧ ಕುತ್ಲೂರು ಇನ್ನಿತರು ಉಪಸ್ಥಿತರಿದ್ದು. ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಸುವರ್ಣ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.