ಕೆಎಸ್ಆರ್ಟಿಸಿ-ಆಲ್ಟೋ ಕಾರು ಮುಖಾಮುಖಿ: ಕೊಕ್ಕಡದ ಒಂದೇ ಕುಟುಂಬದ ಐವರಿಗೆ ಗಂಭೀರ ಗಾಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪಟ್ರಮೆ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಡಹೊಳೆ ಎಂಬಲ್ಲಿ  ಕೆಎಸ್ ಆರ್ ಟಿಸಿ ಬಸ್  ಹಾಗೂ ಆಲ್ಟೋ ಕಾರು ನಡುವೆ ಮುಖಾಮುಖಿ ಡಿಕ್ಕಿ ಹೊಡೆದು  ಕಾರಿನಲ್ಲಿದ್ದ  ಪಟ್ರಮೆಯ ಒಂದೇ ಕುಟುಂಬದ ಐವರು ಗಂಭೀರ ಗಾಯಗೊಂಡ  ಘಟನೆ  ಫೆ.13.ರಂದು ನಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ  ಪಟ್ರಮೆ ನಿವಾಸಿಗಳಿದ್ದ ಆಲ್ಟೋ ಕಾರು  ಸಂಪೂರ್ಣವಾಗಿ ಜಖಂಗೊಂಡಿದ್ದು, ಕಾರಿನಲ್ಲಿದ್ದ ಮೂವರು ಮಕ್ಕಳು ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಪಟ್ರಮೆ ಗ್ರಾ. ಪಂ. ಮಾಜಿ ಸದಸ್ಯ ಮಹಮ್ಮದ್  ಅನ್ಸ್ , ಅವರ ತಾಯಿ, ಪತ್ನಿ  ಹಾಗೂ ಇಬ್ಬರು ಮಕ್ಕಳೊಂದಿಗೆ  ಆಲ್ಟೋ ಕಾರಿನಲ್ಲಿ ಬೆಂಗಳೂರಿಂದ ಊರಿಗೆ ಹಿಂದಿರುಗುತ್ತಿದ್ದ  ಸಂದರ್ಭದಲ್ಲಿ ಸುಮಾರು 10.30ರ ವೇಳೆ ಅಡ್ಡಹೊಳೆ ಬಳಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ

ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.