ಮೂಲಭೂತ ಸೌಕರ್ಯ ವಂಚಿತ ಶಾಲೆಗಳ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ: ಮಕ್ಕಳ ಗ್ರಾಮ ಸಭೆಯಲ್ಲಿ ಒತ್ತಾಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಗ್ರಾಮದ ಬಹುತೇಕ ಶಾಲೆಗಳಲ್ಲಿ ಹಲವು ಸಮಸ್ಯೆಗಳಿದ್ದು, ಕೆಲವೊಂದು ಶಾಲೆಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಈ ಕುರಿತು ಶಾಲೆಗಳ ಅವ್ಯವಸಸ್ಥೆ ಕುರಿತು ವರದಿ ನೀಡಿದರೂ ನಿರ್ಲಕ್ಷ ಧೋರಣೆ ತೋರಲಾಗುತ್ತಿದ್ದು, ಈ ಬಾರಿಯದರೂ ಅದಷ್ಟು ಬೇಗ ನಮ್ಮ ಶಾಲೆಗಳ ಸಮಸ್ಯೆಗಳನ್ನು  ಪರಿಹರಿಸಿ ಎಂದು ಮಕ್ಕಳು ಒತ್ತಾಯಿಸಿದ್ದಾರೆ.

ಭಾರತ್ ಮಾತಾ ಸಭಾಭವನದಲ್ಲಿ ಫೆ.12ರಂದು ಲಾಯಿಲ ಗ್ರಾಮ ಪಂಚಾಯತ್ ಆಯೋಜಿಸಿದ ಮಕ್ಕಳ ಗ್ರಾಮ ಸಭೆಯಲ್ಲಿ ತಮ್ಮ ಶಾಲೆಗಳ ಸಮಸ್ಯೆಗಳು ಹಾಗೂ ಬೇಡಿಕೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಕ್ಕಳು ಒತ್ತಾಯಿಸಿದ್ದಾರೆ.

ಶಾಲಾ ಮಕ್ಕಳೆ ಆಯೋಜಿದ್ದ ಈ ಸಭೆಯಲ್ಲಿ ವಿದ್ಯಾರ್ಥಿಗಳೇ ಅಧ್ಯಕ್ಷತೆ ವಹಿಸಿದ್ದು, ತಮ್ಮ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು. ಪಡ್ಲಾಡಿ ಶಾಲೆಯಲ್ಲಿ ಸರಿಯಾಗಿ ಚರಂಡಿ ವ್ಯವಸ್ಥೆ ಇಲ್ಲದೆ ನೀರು ನುಗ್ಗುತ್ತಿದ್ದು, ರಾತ್ರಿ ವೇಳೆ ಶಾಲಾ ಅವರಣದೊಳಗೆ ಸಾರ್ವಜನಿಕರು ಅಡ್ಡಾಡುತ್ತಿದ್ದು, ಅವರಣದೊಳಗೆ ಕಸ ಕಡ್ಡಿಗಳನ್ನು ಬಿಸಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ  ಶಾಲೆಯ ಸುತ್ತಮುತ್ತ ವಿದ್ಯುತ್ ವ್ಯವಸ್ಥೆ ಕಲ್ಪಿಸಿಕೊಡುವುದರೊಂದಿಗೆ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ತಿಳಿಸಿದ್ದರು.

ಇದೇ ವೇಳೆ ಕರ್ನೋಡಿ ಶಾಲೆಗೆ ಸುಸಜ್ಜಿತವಾದ ಗ್ರಂಥಾಲಯ ಬೇಡಿಕೆ ಇಟ್ಟಿದ್ದು, ಪಡ್ಲಾಡಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ ಈ ಬಗ್ಗೆ ಸರ್ಕಾರ ಕೂಡಲೇ ಗಮನಕ್ಕೆ ಹರಿಸಬೇಕು. ಕುಂಠಿನಿ ಶಾಲೆಗೆ ಸರಿಯಾದ ಅವರಣ ಇಲ್ಲದೆ ಶಾಲೆಯ ಕಿಟಕಿ ಗಾಜುಗಳನ್ನು ಒಡೆಯುವ ಕೆಲಸವನ್ನು ಕಿಡಿಗೇಡಿಗಳು ಮಾಡುತಿದ್ದಾರೆ ಈ ಕುರಿತು ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಒತ್ತಯ ಮಾಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಮಾತನಾಡಿ, ಸಮಸ್ಯೆಗಳಿಗೆ ಹಾಗೂ ಬೇಡಿಕೆಗಳಿಗೆ ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಪಂಚಾಯತ್ ಆಡಳಿತ ಮಂಡಳಿ ಸ್ಪಂದಿಸುತ್ತದೆ. ಶಿಕ್ಷಕರ ಕೊರತೆಯ ಬಗ್ಗೆ ಶಾಸಕರ ಗಮನಕ್ಕೆ ತರುವುದರ ಜೊತೆ ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಶಾಲೆಗಳಿಗೆ ಸಿ ಸಿ ಟಿವಿ ಅಳವಡಿಸುವ ಬಗ್ಗೆಯೂ ಯೋಚಿಸಲಾಗುವುದು  ಎಂದರು.

ಕಳೆದ ಬಾರಿ ನಡೆದ ಮಕ್ಕಳ ಗ್ರಾಮ ಸಭೆಯ ಮನವಿಗೆ ಸ್ಪಂದನೆ ಹಾಗೂ ಈ ಸಲದ ಸಭೆಯ ಮಾಹಿತಿ ಸಿಗದ ಬಗ್ಗೆ ಶಿಕ್ಷಕಿಯೊಬ್ಬರು ಪ್ರಶ್ನೆ ಮುಂದಿಟ್ಟಾಗ ಕಾರ್ಯದರ್ಶಿ ಪುಟ್ಟ ಸ್ವಾಮಿ ಅವರು ಈ ಬಾರಿ ತಮ್ಮ ಮನವಿಗೆ ಸ್ಪಂದಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇವೆ. ಹಾಗೇ ಕೊರೊನಾದ ಕಾರಣಕ್ಕಾಗಿ ಈ ಸಭೆಯ ಬಗ್ಗೆ ಮಾಹಿತಿ ನೀಡಿಲ್ಲ ಮಕ್ಕಳ ಸಂಖ್ಯೆ ಅಧಿಕವಾದರೆ ಕೊರೊನಾ ಮುಂಜಾಗರೂಕತೆಯನ್ನು ಪಾಲಿಸಲು ಕಷ್ಟವಾಗಬಹುದು ಎಂಬ ಕಾರಣಕ್ಕಾಗಿ ಸೀಮಿತ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾ ಪಂ ಸದಸ್ಯರಾದ ಸುಗಂಧಿ, ಅಶಾ ಬೆನಡಿಕ್ಟ ಸಲ್ಡಾನ, ಜಯಂತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರತ್ನಾವತಿ, ಶಾಲಾ ಅಧ್ಯಾಪಕರು ,ಮಕ್ಕಳು, ಉಪಸ್ಥಿತರಿದ್ದರು. ‌ಕಾರ್ಯದರ್ಶಿ ಪುಟ್ಟಸ್ವಾಮಿ ನಿರೂಪಿಸಿದರು. ಲೆಕ್ಕ ಪರಿಶೋಧಕಿ ರೇಶ್ಮಾ  ಗಂಜಿಕಟ್ಟಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.