ಉಜಿರೆ: ವಿನಾಯಕ ನಗರದ ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾ ಮಹೋತ್ಸವಕ್ಕೆ ಇಂದು (ಫೆ.13) ಚಾಲನೆ ದೊರೆತಿದ್ದು, ಉತ್ಸವದ ಅಂಗವಾಗಿ ಹೊರೆ ಕಾಣಿಕೆ ಸೇವೆ ಹಾಗೂ ಶ್ರೀ ಸಿದ್ಧಿವಿನಾಯಕ ದೇವರ ನೂತನ ರಜತಬಿಂಬ ಮೆರವಣಿಗೆ ನಡೆಯಿತು.
ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದಿಂದ ಆರಂಭವಾದ ಹೊರಕಾಣಿಕೆ ಸಮರ್ಪಣೆ ಮತ್ತು ಶ್ರೀ ಸಿದ್ಧಿವಿನಾಯಕ ದೇವರ ನೂತನ ರಜತಬಿಂಬ ಮೆರವಣಿಗೆ ದೇವಳವನ್ನು ತಲುಪಿದ್ದು, ಶ್ರೀ ಸಿದ್ಧಿವಿನಾಯಕ ನೂತನ ರಜತಬಿಂಬ ಮೂರ್ತಿಯನ್ನು ಮೂರ್ತಿ ದಾನಿ ಶಶಿಕಾಂತ ಹೊತ್ತಿದ್ದರು. ಜೊತೆಗೆ ಶ್ರೀಮತಿ ರಾಜಶ್ರೀ ಕಾಮತ್, ರಂಜಿತ್, ಉದ್ಯಮಿ ಲಕ್ಷ್ಮೀ ಗ್ರೂಪ್ ಮೋಹನ್ ಕುಮಾರ್ ಇದ್ದರು.
ಈ ವೇಳೆ ಮೋಹನ್ ಕುಮಾರ್ ಹಾಗೂ ಪ್ರತಿಷ್ಠಾ ಮಹೋತ್ಸವ ಸಮಿತಿಯ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ, ಕಾರ್ಯಾಧ್ಯಕ್ಷ ವಿಶ್ವನಾಥ ನೇಕಾರ ಕಕ್ಕರಬೆಟ್ಟು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೆ. ಬಾಲಕೃಷ್ಣ ಗೌಡ, ಕಾರ್ಯಾಧ್ಯಕ್ಷ ರಾಜಪ್ಪ ನೇಕಾರ, ಕೋಶಾಧಿಕಾರಿ ರಾಮದಾಸ್ ಭಂಡಾರ್ಕಾರ್, ಪ್ರಧಾನ ಕಾರ್ಯದರ್ಶಿ ಹರೀಶ್ ನೇಕಾರ ಪ್ರತಿಷ್ಠಾ ಮಹೋತ್ಸವ ಸಮಿತಿಯ ಕಾರ್ಯದರ್ಶಿಯ ಸಂತೋಷ್ ಕುಮಾರ್, ಕೋಶಾಧಿಕಾರಿ ಹರಿಪ್ರಸಾದ್ ನೇಕಾರ, ಜಯಂತ್ ಶೆಟ್ಟಿ ಕುಂಠಿನಿ ಸಮಿತಿಯ ಪದಾಧಿಕಾರಿಗಳು ಸದಸ್ಯರು, ಭಕ್ತಾಧಿಗಳು ಉಪಸ್ಥಿತರಿದ್ದರು.