ಉಜಿರೆ: ಇಲ್ಲಿಯ ಕಾಶಿಬೆಟ್ಟು ಭಗವಾನ್ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ 21ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಹಾಗೂ ನವಗ್ರಹ ಶಾಂತಿಯುಕ್ತ ಶನೈಶ್ಚರ ಶಾಂತಿ ಹೋಮ ಫೆ.13 ರಂದು ನಡೆಯಿತು.
ಈ ಪ್ರಯುಕ್ತ ದೇವಸ್ಥಾನದಲ್ಲಿ ನವಕ ಪ್ರಧಾನ ಕಲಾಹೋಮ, ನವಗ್ರಹ ಶಾಂತಿ ಹೋಮ, ಶನೈಶ್ಚರ ಶಾಂತಿ ಹೋಮ, ಪೂಜೆ, ಪೂರ್ಣಾಹುತಿ, ಶ್ರೀ ಶನೈಶ್ಚರ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಭಗವಾನ್ ಶ್ರೀ ಶನೈಶ್ಚರ ದೇವಸ್ಥಾನದ ಧರ್ಮದರ್ಶಿ ಡಾ| ಜನಾರ್ದನ ಆಚಾರ್ಯ, ಪುರೋಹಿತರಾದ ಯೋಗೀಶ್ ಪುರೋಹಿತ, ಯಶವಂತ ಪುರೋಹಿತ ಹಾಗೂ ಊರ -ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.