ಉಜಿರೆ ಗ್ರಾಮದ ಮಲೆಬೆಟ್ಟು ಹೊಸಮನೆ ದಿ| ಪೆರ್ನು ಪೂಜಾರಿಯವರ ಮಗ ವಿಶ್ವನಾಥ ಪೂಜಾರಿ (45ವ) ರವರು ಅಲ್ಪಕಾಲದ ಅಸೌಖ್ಯದಿಂದ ಫೆ.10ರಂದು ನಿಧನರಾದರು.
ಮೃತರು ಕೊಯ್ಯೂರು ಕಸಬ ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಪರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಇವರು ಪತ್ನಿ ವಿಮಲ, ಇಬ್ಬರು ಪುತ್ರರಾದ ಅನ್ವಿತ್, ಅದ್ವಿತ್, ತಾಯಿ ಸುಂದರಿ, ಸಹೋದರರಾದ ಎಂ.ಪಿ ರಾಮ, ವೆಂಕಪ್ಪ, ಸಾಂತಪ್ಪ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.