ಬೆಳ್ತಂಗಡಿ: ಕನಸು ಮಾರಾಟಕ್ಕಿದೆ ಚಿತ್ರಕ್ಕೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ತಾಲೂಕಿನ ಯುವ ಪ್ರತಿಭೆಗಳು ವಿಭಿನ್ನ ಅಭಿರುಚಿಯ ಕನ್ನಡ ಚಲನಚಿತ್ರವನ್ನು ನಿರ್ಮಿಸುವ ಕನಸ ಬೆನ್ನೇರಿ ಹೊರಟು ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟವಾದ ಹೆಜ್ಜೆ ಗುರುತೊಂದನ್ನು ಮೂಡಿಸುವ ತವಕದಲ್ಲಿದ್ದಾರೆ.
ಒಂದು ವಿಭಿನ್ನ ಕಥಾ ಹಂದರದ ಯುವ ತಾರಗಣವನ್ನು ಒಳಗೊಂಡ ಚಿತ್ರ “ಕನಸು ಮಾರಾಟಕ್ಕಿದೆ” ಈ ಚಿತ್ರವು ರಾಜ್ಯಾಧ್ಯಂತ ಬಿಡುಗಡೆಯಾಗಿದ್ದು ನಿಮ್ಮೆಲ್ಲರ ಆಶೀರ್ವಾದ ಈ ಚಿತ್ರತಂಡದ ಮೇಲಿರಲಿ ಎಂದು ಶಾಸಕ ಹರೀಶ್ ಪೂಂಜ ನುಡಿದರು.
ಅವರು  ಬೆಂಗಳೂರು ನರ್ತಕಿ ಚಿತ್ರಮಂದಿರದಲ್ಲಿ ಕನಸು ಮಾರಾಟಕ್ಕಿದೆ ಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ನಮ್ಮ ಬೆಳ್ತಂಗಡಿಯ ಯುವ ಪ್ರತಿಭೆಗಳ ಕನಸು ನನಸಾಗಲಿ ಎನ್ನುವ ಹಾರೈಕೆಯೊಂದಿಗೆ ಚಿತ್ರವು ಅಮೋಘ ಪ್ರದರ್ಶನ ಕಂಡು ಶತದಿನೋತ್ಸವವನ್ನು ಆಚರಿಸಲಿ ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕ ಸ್ಮಿತೇಶ್ ಬಾರ್ಯ, ಸಂಗೀತ ನಿರ್ದೇಶಕಿ ಮಾನಸಹೊಳ್ಳ, ಸಂಕಲನಕಾರ ಗಣೇಶ್ ನೀರ್ಚಾಲ್, ಜನಸ್ನೇಹಿ ಯೋಗೀಶ್, ಪ್ರೇಮ್ ನಾಥ್ ಶೆಟ್ಟಿ‌ ಮುಂಬೈ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಿ.ಜಿ, ನಯನ, ಧೀರಜ್, ದಿವ್ಯ, ಚಿದಂಬರ, ಶಿವಾನಂದ ಸಿಂಧಗಿ, ಅನೀಶ್, ಹಿರಿಯ ನಟ ಕೆ.ಎಸ್. ಶ್ರೀಧರ್, ನಾಯಕ ಪ್ರಜ್ಞೇಶ್ ಶೆಟ್ಟಿ, ದೀಕ್ಷಿತ್ ಪೂಜಾರಿ, ನೀರಜ್, ಮುಂತಾದವರು ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.