ಕಲ್ಮಂಜ ಗ್ರಾಮ ಪಂಚಾಯತ್‌: ಅಧ್ಯಕ್ಷರಾಗಿ ಶ್ರೀಧರ ಮಡಿವಾಳ,ಉಪಾಧ್ಯಕ್ಷರಾಗಿ ವಿಮಲ ಗೌಡ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಲ್ಮಂಜ ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷರಾಗಿ ಶ್ರೀಧರ ಮಡಿವಾಳ ಎಂ. ಅವರು ಚುನಾಯಿತರಾಗಿದ್ದು, ಉಪಾಧ್ಯಕ್ಷೆಯಾಗಿ ವಿಮಲ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಲ್ಮಂಜ ಗ್ರಾ.ಪಂನಲ್ಲಿ 10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 8 ಸ್ಥಾನವನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪಡೆದುಕೊಂಡಿದ್ದು,2 ಸ್ಥಾನ ಕಾಂಗ್ರೇಸ್ ಬೆಂಬಲಿತರ ಪಾಲಾಗಿತ್ತು.
ಫೆ.12 ರಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಾಗ ಬಿಜೆಪಿ ಪಕ್ಷದಿಂದ ಅಧಿಕೃತವಾಗಿ ಘೋಷಣೆಯಾಗಿದ್ದ, ಅಭ್ಯರ್ಥಿ ಶ್ರೀಧರ ಮಡಿವಾಳ ಅವರು ನಾಮಪತ್ರ ಸಲ್ಲಿಸಿದರೆ, ಇದೇ ಪಕ್ಷ ಬೆಂಬಲದಿಂದ ಆಯ್ಕೆಯಾಗಿದ್ದ ಇನ್ನೋರ್ವ ಸದಸ್ಯ ಪ್ರವೀಣ್ ಗೌಡ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯವಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವುದರೊಂದಿಗೆ ಚುನಾವಣೆ ಬಹಳಷ್ಟು ಕುತೂಹಲವನ್ನು ಕೆರಳಿಸಿತು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರಾದ ವಿಮಲಾ ಗೌಡ ಅವರು ನಾಮಪತ್ರ ಸಲ್ಲಿಸಿದರು.


ಚುನಾವಣಾಧಿಕಾರಿ ಸಹಾಯಕ ಕೃಷಿ ನಿರ್ದೇಶಕಿ ಶೈಲಜಾ ಎ. ಎನ್ ರವರು ಚುನಾವಣಾ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ, ಅಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣೆಯನ್ನು ನಡೆಸಿದರು.
ಚುನಾವಣೆಯಲ್ಲಿ ಮತ ಎಣಿಕೆ ಮಾಡಿದಾಗ ಶ್ರೀಧರ ಮಡಿವಾಳ ಎಂ. ರವರು 7 ಮತಗಳನ್ನು ಪಡೆದುಕೊಂಡು ಅಧ್ಯಕ್ಷರಾಗಿ ಚುನಾಯಿತರಾದರು. ಇವರ ಪ್ರತಿಸ್ಪರ್ಧಿ ಪ್ರವೀಣ್ ಗೌಡ 3 ಮತಗಳನ್ನು ಪಡೆಯಲಷ್ಟೇ ಶಕ್ತರಾದರು.
ಉಪಾಧ್ಯಕ್ಷೆ ಸ್ಥಾನಕ್ಕೆ ವಿಮಲಾ ಗೌಡ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳು ಅವರ ಅವಿರೊಧ ಆಯ್ಕೆನ್ನು ಘೋಷಿಸಿದರು. ಈ ಸಂದರ್ಭದಲ್ಲಿ ಪಂ.ಅ ಅಧಿಕಾರಿ ಇಮ್ತಿಯಾಜ್, ಗ್ರಾ.ಪಂ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.