ಚಾರ್ಮಾಡಿ: ಚಾರ್ಮಾಡಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಕೆ.ವಿ ಪ್ರಸಾದ್ ಉಪಾಧ್ಯಕ್ಷೆಯಾಗಿ ಸುರೇಖಾ ಆಯ್ಕೆಯಾಗಿದ್ದಾರೆ.
ಒಟ್ಟು 28ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 23 ಸ್ಥಾನವನ್ನು ಪಡೆಯುವ ಮೂಲಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಉಳಿದಂತೆ 3 ಸ್ಥಾನವನ್ನು ಕಾಂಗ್ರೇಸ್ ಬೆಂಬಲಿತರು ಪಡೆದು ಕೊಂಡಿದ್ದು, ಇನ್ನುಳಿಸ 2 ಸ್ಥಾನಗಳು ಎಸ್.ಡಿ.ಪಿ.ಐ ಬೆಂಬಲಿತರ ಪಾಲಾಗಿದೆ.
ಚಿಬಿದ್ರೆ 2ನೇ ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾದ ಕೆ.ವಿ ಪ್ರಸಾದ್ ಹಿಂದುಳಿದ ವರ್ಗ ಎ ಪುರುಷ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿ ಅಧ್ಯಕ್ಷರಾಗಿದ್ದಾರೆ. ತೋಟಾತ್ತಾಡಿ 1ನೇ ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾದ ಸುರೇಖಾ ಹಿಂದುಳಿದ ವರ್ಗ ಬಿ ಮಹಿಳೆ ಮೀಸಲಾತಿಯಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಚಾರ್ಮಾಡಿ ಪಶು ಸಂಗೋಪನಾ ಇಲಾಖೆಯ ಪಶು ವೈದ್ಯಾಧಿಕಾರಿ ಮಂಜ ನಾಯ್ಕ ರವರು ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ ಕೊಟ್ಟಿದ್ದು, ಈ ಸಂದರ್ಭದಲ್ಲಿ ಪಂ.ಅ ಅಧಿಕಾರಿ ಪ್ರಕಾಶ್ ಶೆಟ್ಟಿ ಪಿ ಹೆಚ್, ಪಂಚಾಯತ್ ನ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.