ಕೊಕ್ಕಡ: ಕೊಕ್ಕಡ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಯೋಗಿಶ್ ಆಲಂಬಿಲ, ಉಪಾಧ್ಯಕ್ಷ ಪವಿತ್ರಾ ಆಯ್ಕೆಯಾಗಿದ್ದಾರೆ.
ಒಟ್ಟು 13 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 13ಕ್ಕೆ 13 ಸ್ಥಾನವನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪಡೆದುಕೊಳ್ಳುವ ಮೂಲಕ ಜಯ ಸಾಧಿಸಿದ್ದಾರೆ.
ಆಲಂಬಿಲ ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾಗಿರುವ ಯೋಗಿಶ್ ಹಿಂದುಳಿದ ವರ್ಗ ಬಿ ಮಿಸಲಾತಿಯಲ್ಲಿ ಅಡಿಯಲ್ಲಿ ಸ್ಪರ್ಧಿಸಿದ್ದು, ಕೊಕ್ಕಡ ಗ್ರಾಮದ 2ನೇ ವಾರ್ಡ್ ನಿಂದ ಸ್ಪರ್ಧಿಸಿದ್ದಾರೆ. ಹಾಗೇ ಸಾಮಾನ್ಯ ಮಹಿಳಾ ಮೀಸಲಾತಿ ಅಡಿಯಲ್ಲಿ ನಾಮಪತ್ರ ಸಲ್ಲಿಸಿದ್ದ ಪವಿತ್ರಾ ಕೊಕ್ಕಡ ಗ್ರಾಮದ 3ನೇ ವಾರ್ಡ್ ನಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದಾರೆ.
ಬೆಳ್ತಂಗಡಿ ಎ.ಪಿ.ಎಮ್.ಸಿ ಕಾರ್ಯದರ್ಶಿ ರವೀಂದ್ರ ರವರು ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ ಕೊಟ್ಟಿದ್ದು, ಈ ಸಂದರ್ಭದಲ್ಲಿ ಪಂ.ಅ. ಅಧಿಕಾರಿ ದೀಪಕ್ ರಾಜ್, ಕಾರ್ಯದರ್ಶಿ ಭಾರತಿ, ಪಂಚಾಯತ್ ನ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.