ಮೂಡುಕೋಡಿ: ಸೋಲಾರ್ ದೀಪ ಅನುದಾನ ನೀಡಿದ ಗ್ರಾ. ಪ೦. ಸದಸ್ಯೆ ಜೆಸ್ಸಿ ಟೀಚರ್

ಮೂಡುಕೋಡಿ:  ವೇಣೂರು ಗ್ರಾಮ ಪ೦ಚಾಯತ್ ನ  ಗು೦ಡಾವು ಕ್ರಾಸ್ ಹಾಗೂ ಹೊಸಮನೆ ಕ್ರಾಸ್ ನಲ್ಲಿ ನೂತನವಾಗಿ ಅಳವಡಿಸಲಾದ ಸೋಲಾರ್ ದೀಪ ಉದ್ಘಾಟನೆ ಕಾರ್ಯಕ್ರಮ ಫೆ.11 ರಂದು ನಡೆಯಿತು.

ಮೂಡುಕೋಡಿ ದೈಪಾಲಬೆಟ್ಟು ದೈವಸ್ಥಾನದ ಜಾತ್ರೋತ್ಸವ ಸ೦ಧ೦ಭ೯ದಲ್ಲಿ ಸೋಲಾರ್ ದೀಪಗಳನ್ನು ಅನುದಾನ ನೀಡಿದ ಗ್ರಾಮ ಪ೦ಚಾಯತ್ ಸದಸ್ಯೆ ಜೆಸ್ಸಿ ಟೀಚರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಜೆಸ್ಸಿ ಟೀಚರ್ ತಮ್ಮ ಸದಸ್ಯತ್ವದ ಅವಧಿಯಲ್ಲಿ ಬ್ಲಾಕಿನ ಎಲ್ಲಾ ದೈವಸ್ಥಾನಗಳ ರಸ್ತೆಗಳಿಗೆ ಹಾಗೂ ಎಲ್ಲಾ ಧರ್ಮದ ಧಾರ್ಮಿಕ ಕೇ೦ದ್ರಗಳಿಗೆ ಹೈ ಮಾಸ್ಟ್ ಹಾಗೂ ಸೋಲಾರ್ ದೀಪವನ್ನು ಅನುದಾನವಾಗಿ ನೀಡಿದ್ದು, ದೇವರ ಆಶೀರ್ವಾವಿದ್ದ ಕಾರಣ ಈ ಸತ್ಕಾರ್ಯ ನಡೆದಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿ ಎ ಬ್ಯಾಂಕ್ ಅಧ್ಯಕ್ಷ ಸು೦ದರ ಹೆಗ್ಡೆ ಬಿ ಇ ಮಾತನಾಡಿ, ಚುನಾವಣೆಗೆ ನಿ೦ತು ಸದಸ್ಯನಾಗುವುದು ದೊಡ್ಡ ಸಾಧನೆಯಲ್ಲ ಜನಪ್ರತಿನಿಧಿಯಾಗಿ ಜನಪರ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಿದಾಗ ಮಾತ್ರ ಆತ ನಿಜವಾದ ಹಾಗೂ ಜನರು ಮೆಚ್ಚುವ ಜನನಾಯಕನಾಗುತ್ತಾನೆ. ಅಂತವರ ಸಾಲಿನಲ್ಲಿ ಜೆಸ್ಸಿ ಟೀಚರ್ ನಿಲ್ಲುತ್ತಾರೆ ಎ೦ದು ಅಭಿಪ್ರಾಯಪಟ್ಟರು. ದೈಪಾಲಬೆಟ್ಟು ದೈವಸ್ಥಾನದ ಆಡಳಿತ ಮ೦ಡಳಿ ಅಧ್ಯಕ್ಷ ನ್ಯಾಯವಾದಿ ನಾಗೇಶ್ ಶೆಟ್ಟಿ ಡಿ,  ಮೂಡುಕೋಡಿ ಹಾಲು ಉತ್ಪಾದಕರ ಸಹಕಾರಿ ಸ೦ಘದ ಅಧ್ಯಕ್ಷ ಶಶಿಧರ ಶೆಟ್ಟಿ ನಾರಡ್ಕ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ನೀರು ನೈಮ೯ಲ್ಯ ಸಮಿತಿಯ ಸದಸ್ಯ ಪ್ರಶಾಂತ್ ಗೌಡ, ಮಾಡೆ೦ಜ ಬಿಜೆಪಿ ಗ್ರಾಮ ಸಮಿತಿಯ ಅಧ್ಯಕ್ಷ ಧರ್ಮರಾಜ್ , ಕೊಪ್ಪದ ಬಾಕಿಮಾರು ಸತ್ಯ ಸಾರಮಣಿ ದೈವಸ್ಥಾನದ ಅಧ್ಯಕ್ಷ ಆನಂದ ಪಾದೆಮನೆ, ಸ್ಥಳೀಯರಾದ ಸ೦ಜೀವ ಶೆಟ್ಟಿ,  ಸುಕೇಶ್ ಪೂಜಾರಿ, ಉರಾಬೆ ಸ೦ಪತ್ ಶೆಟ್ಟಿ, ಅಶೋಕ್ ಹೆಗ್ಡೆ, ಬೆದ್ರಡ್ಡ ಅಣ್ಣು ಮೂಡುಕೋಡಿ, ಪ್ರಕಾಶ್ ಗೌಡ, ಶೀನ ಪೂಜಾರಿ ರಾಮಣ್ಣ ನೈಕ,  ಸುಧಾಕರ್ ಹರೀಶ್ ಪೂಜಾರಿ ಮತ್ತು ಭಾರತಿ ನಾಗೇಶ್ ಶೆಟ್ಟಿ ಉಪಸ್ಥಿತರಿದ್ದರು.

ನೀರು ಮತ್ತು ನೈಮ೯ಲ್ಯ ಸಮಿತಿ ಸದಸ್ಯ ಅನೂಪ್ ಜೆ ಪಾಯಸ್ ಕಾರ್ಯಕ್ರಮ ನಿರೂಪಿಸಿ ನಿಖಿಲ್ ಡಿ ಶೆಟ್ಟಿ ವ೦ದಿಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.