ಇಂದಬೆಟ್ಟು: ಇಂದಬೆಟ್ಟು ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಆನಂದ ಅಡೀಲು ಹಾಗೂ ಉಪಾಧ್ಯಕ್ಷರಾಗಿ ಆಶಾಲತಾ ಸುರೇಂದ್ರ ಗುಡಿಗಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 11 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 10 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿದ್ದಾರೆ. ಉಳಿದ ಒಂದು ಸ್ಥಾನ ಕಾಂಗ್ರೆಸ್ ಬೆಂಬಲಿತರ ಪಾಲಾಗಿದೆ.
ಇಂದಬೆಟ್ಟು ಗ್ರಾಮ ಪಂಚಾಯತ್ ನ ಅಧ್ಯಕ್ಷ ಗಾದಿಗೆ ಸಾಮಾನ್ಯ ಕ್ಷೇತ್ರ ಮೀಸಲಾತಿ ನಿಗದಿಯಾಗಿದ್ದು, ಇಂದಬೆಟ್ಟು-4 ಕ್ಷೇತ್ರದಿಂದ ಆಯ್ಕೆಯಾದ ಆನಂದ ಅಡೀಲು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಇಂದಬೆಟ್ಟು ವಾರ್ಡ್-3 ರಲ್ಲಿ ಉ ಹಿಂದುಳಿದ ವರ್ಗ ಎ ಮಹಿಳಾ ಕ್ಷೇತ್ರದಿಂದ ಆಯ್ಕೆಯಾದ ಆಶಾಲತಾ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ದ್ದರು.
ಇನ್ನು ಚುನಾವಣೆ ಪ್ರಕ್ರಿಯೆಯಲ್ಲಿ ಸಹಾಯಕ ಕೃಷಿ ಅಧಿಕಾರಿ ಹುಮೇರಾ ಜಬೀನ್ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಈ ವೇಳೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸವಿತಾ ಬಿ.ಸಿ , ಗ್ರಾ.ಪಂ ಸದಸ್ಯರು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.