ತಣ್ಣೀರುಪಂತ ಗ್ರಾ. ಪಂ.: ಅಧ್ಯಕ್ಷೆಯಾಗಿ ಫಾತಿಮಾ ಇಶ್ರತ್, ಉಪಾಧ್ಯಕ್ಷರಾಗಿ ಅಯ್ಯಬ್ ಡಿ. ಕೆ. ಆಯ್ಕೆ

ತಣ್ಣೀರುಪಂತ: ತಣ್ಣೀರುಪಂತ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷೆಯಾಗಿ ಪಾತಿಮಾ ಇಶ್ರತ್, ಉಪಾಧ್ಯಕ್ಷರಾಗಿ ಅಯ್ಯಬ್ ಡಿ.ಕೆ.ಅವಿರೋಧವಾಗಿ ಆಯ್ಕೆಯಾಗಿದ್ದರೆ.  ಫೆ.11 ರಂದು ಚುನಾವಣೆ ನಡೆದಿದ್ದು, ಅಧ್ಯಕ್ಷ ಗಾದಿಗೆ ಇಬ್ಬರು ಮಹಿಳೆಯರು ನಾಮ ಪತ್ರ ಸಲ್ಲಿಸಿದರು. ಪಾತಿಮಾ ಇಶ್ರತ್ – 14 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದು, ಪ್ರತಿಸ್ಪರ್ಧಿ ಪ್ರೀಯ 7 ಮತಗಳನ್ನು ಪಡೆದಿದ್ದಾರೆ.

ಇನ್ನು ಚುನಾವಣಾ ಅಧಿಕಾರಿಯಾಗಿ ಬೆಳ್ತಂಗಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತಾರಣಧಿಕಾರಿ ಶೇಷಗಿರಿ ನಾಯಕ್ ಕಾರ್ಯಾಚಾರಿಸಿದ್ದು, ಅಭಿವೃದ್ಧಿ ಅಧಿಕಾರಿ ಸಿಬ್ಬಂದಿ ವರ್ಗದವರು ಸಹಕರಿಸಿದ್ದಾರೆ.

ಈ ವೇಳೆ ಜಿಲ್ಲಾ ಪಂಚಾಯತ್ ಸದಸ್ಯರಾದ ಶಾಹುಲ್ ಹಮೀದ್,ತಾಲೂಕು ಪಂಚಾಯತ್ ಸದಸ್ಯೆ ಕೇಶವತಿ, ಕೃಷಿ.ಉ.ಸಂ.ಅಧ್ಯಕ್ಷ ದುಗ್ಗಪ್ಪ ಗೌಡ, ಶೈಲೇಶ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.