ಉಜಿರೆ: ಗ್ಯಾಸ್ಟ್ರೋಎಂಟರಾಲಜಿಸ್ಟ್ ಹಾಗೂ ಹೆಪಟಾಲಜಿಸ್ಟ್ ವಿಭಾಗದಲ್ಲಿ ಪರಿಣಿತಿ ಹೊಂದಿರುವ ವೈದ್ಯ ಅನುರಾಗ್ ಜೆ. ಶೆಟ್ಟಿ, ಮಣಿಪಾಲ ಇವರು ಪ್ರತಿ ತಿಂಗಳ ಮೂರನೇ ಬುಧವಾರದಂದು ಬೆನಕ ಹೆಲ್ತ್ ಸೆಂಟರ್ ಗೆ ಭೇಟಿ ನೀಡಲಿದ್ದಾರೆ ಎಂದು ಬೆನಕ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಗೋಪಾಲ್ ಕೃಷ್ಣ ಭಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿದ್ದಾರೆ.
ತುರ್ತು ಕರೆ ಹಾಗೂ ಶಸ್ತ್ರ ಚಿಕಿತ್ಸೆ ಕಾರ್ಯನಿಮಿತ್ತ ಬೆನಕ ಆಸ್ಪತ್ರೆಗೆ ಭೇಟಿ ನೀಡಲಿರುವ ವೈದ್ಯ ಅನುರಾಗ್ ಜೆ. ಶೆಟ್ಟಿ, ಹೊರರೋಗಿಗಳ ವಿಭಾಗದ ಸಂಪರ್ಕಕ್ಕೆ ಲಭ್ಯವಿರಲಿದ್ದು, ಎದೆಯುರಿ, ಪಿತ್ತೋದ್ರೇಕ, ವಿಪರೀತ ವಾಂತಿ, ಹುಳಿತೇಗು, ಹೊಟ್ಟೆ ನೋವು, ಹೊಟ್ಟೆ ಉಬ್ಬರಿಸುಕೆ, ಅಜೀರ್ಣ, ಮಲಬದ್ಧತೆ, ಜಾಂಡೀಸ್, ಹೃದ್ರೋಗ, ಬೇದಿ, ಮಲದಲ್ಲಿ ರಕ್ತಸ್ರಾವ ಸಮಸ್ಯೆಯಿಂದ ಬಳಲುತ್ತಿರುವವರು ಇವರನ್ನು ಸಂಪರ್ಕಿಸಬಹುದು.