ಪಟ್ರಮೆ ಗ್ರಾ.ಪಂ: ನೂತನ ಅಧ್ಯಕ್ಷರಾಗಿ ಮೋಹಿನಿ, ಉಪಾಧ್ಯಕ್ಷರಾಗಿ ಯತೀಶ್ ಅವಿರೋಧ ಆಯ್ಕೆ

ಪಟ್ರಮೆ: ಪಟ್ರಮೆ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಮೋಹಿನಿ ಹಾಗೂ ಉಪಾಧ್ಯಕ್ಷರಾಗಿ ಯತೀಶ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಟ್ರಮೆ ಗ್ರಾಮ ಪಂಚಾಯತದಲ್ಲಿ ಒಟ್ಟು 6 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 6 ಸ್ಥಾನಗಳಲ್ಲಿಯೂ ಜಯ ಸಾಧಿಸುವ ಮೂಲಕ  ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪಂಚಾಯತ್ ಅಧಿಕಾರವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು .

ಪಟ್ರಮೆ  ವಾರ್ಡ್-2 ರಲ್ಲಿ ಹಿಂದುಳಿದ ವರ್ಗ ಎ  ಕ್ಷೇತ್ರದಿಂದ ಆಯ್ಕೆಯಾಗಿದ್ದ ಶ್ರೀಮತಿ ಮೋಹಿನಿ ರವರು ಅಧ್ಯಕ್ಷ ಗಾದಿಗೆ ನಿಗದಿಯಾದ ಮೀಸಲಾತಿಗೆ ಸೇರಿದ್ದರಿಂದ ಅವರು ಇದರ ಸದುಪಯೋಗವನ್ನು ಪಡೆದುಕೊಂಡು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಕ್ಷೇತ್ರದಿಂದ  ಯತೀಶ್ ರವರು ನಾಮಪತ್ರ ಸಲ್ಲಿಸಿದ್ದರು.

ಇನ್ನು ಚುನಾವಣೆ ಪ್ರಕ್ರಿಯೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ರವೀಂದ್ರ  ಅವರು ಚುನಾವಣಾಧಿಕಾರಿಯಾಗಿ  ಕಾರ್ಯನಿರ್ವಹಿಸಿದ್ದು,  ಈ ವೇಳೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಿತೇಶ್ ಎನ್ ಪುತ್ರನ್, ಗ್ರಾ.ಪಂ ಕಾರ್ಯದರ್ಶಿ ಅಮ್ಮಿ ಪೂಜಾರಿ , ಗ್ರಾ.ಪಂ ನೂತನ ಸದಸ್ಯರುಗಳು, ಗ್ರಾ.ಪಂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.