ಕೊಯ್ಯೂರು ಗ್ರಾ.ಪಂ ಅಧ್ಯಕ್ಷರಾಗಿ ಜಗನ್ನಾಥ, ಉಪಾಧ್ಯಕ್ಷರಾಗಿ ಸುಮಿತಾ ಅವಿರೋಧ ಆಯ್ಕೆ

ಕೊಯ್ಯೂರು: ಕೊಯ್ಯೂರು ಗ್ರಾಮ ಪಂಚಾಯತದ ನೂತನ ಅಧ್ಯಕ್ಷರಾಗಿ ಜಗನ್ನಾಥ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಸುಮಿತಾ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೊಯ್ಯೂರು ಗ್ರಾ.ಪಂನಲ್ಲಿ ಫೆ.11 ರಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸೂರ್ಯನಾರಾಯಣ ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಎಸ್, ಕಾರ್ಯದರ್ಶಿ ವಸಂತ ನಿರಾರಿ, ಗ್ರಾ.ಪಂ ಸದಸ್ಯರು, ಗ್ರಾ.ಪಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕೊಯ್ಯೂರು ಗ್ರಾಮ ಪಂಚಾಯತದ ಒಟ್ಟು 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 9 ಸ್ಥಾನಗಳನ್ನೂ ಬಿಜೆಪಿ ಬೆಂಬಲಿತರ ಅಭ್ಯರ್ಥಿಗಳು ಪಡೆದುಕೊಂಡು ಪಂಚಾಯತದ ಅಧಿಕಾರದ ಗದ್ದುಗೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಕೇವಲ 4 ಸ್ಥಾನಗಳನ್ನಷ್ಟೇ ಪಡೆದುಕೊಂಡಿದ್ದರು.
ಕೊಯ್ಯೂರು ಗ್ರಾಮ ಪಂಚಾಯತದಲ್ಲಿ ಅಧ್ಯಕ್ಷ ಗಾದಿಗೆ ಪ.ಜಾತಿ ಮೀಸಲಾತಿ ನಿಗದಿಯಾಗಿದ್ದು, ಕೊಯ್ಯೂರು ವಾರ್ಡ್-1 ರಲ್ಲಿ ಪ.ಜಾತಿ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಜಗನ್ನಾಥ ರವರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾತಿ ನಿಗದಿಯಾಗಿದ್ದು, ಕೊಯ್ಯೂರು ವಾರ್ಡ್-4ರಲ್ಲಿ ಹಿಂದುಳಿದ ವರ್ಗ ಎ ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಸುಮಿತಾ ರವರು ನಾಮಪತ್ರ ಸಲ್ಲಿಸಿ ,ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.