ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ


ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ, ನಾಲ್ಕೂರು, ತೆಂಕಕಾರಂದೂರು ಇವುಗಳ ಸಹಯೋಗದೊಂದಿಗೆ ಸುಮಾರು ರೂ 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದ ಲೋಕಾರ್ಪಣೆಯು ಮಾರ್ಚ್ 10 ಮತ್ತು 11ರಂದು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಕೇಂದ್ರದ ಮಾಜಿ ಸಚಿವ, ಬಿಲ್ಲವ ಸಮಾಜದ ಮುಖಂಡ ಬಿ ಜನಾರ್ದನ ಪೂಜಾರಿಯವರು ಅವರ ನಿವಾಸದಲ್ಲಿ ಫೆ. 9ರಂದು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಧ್ಯಕ್ಷ ಹೆಚ್. ಧರ್ಣಪ್ಪ ಪೂಜಾರಿ, ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್‌.ಎಸ್, ಉದ್ಯಮಿ ರವಿ ಪೂಜಾರಿ ಚಿಲಿಂಬಿ ಮಂಗಳೂರು, ಯುವವಾಹಿನಿ ಮಂಗಳೂರು ಘಟಕದ ಪೂರ್ವಾಧ್ಯಕ್ಷ ಹರೀಶ್ ಕೆ ಬೈಲಬರಿ, ಸಂಘದ ಮಾಜಿ ಅಧ್ಯಕ್ಷರುಗಳಾದ ಯುವರಾಜ ವೈ, ದಿನೇಶ್ ಅಂತರ, ದಿನೇಶ್ ಕುದ್ರೋಟ್ಟು, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಜಗದೀಶ್ ಬಳ್ಳಿದಡ್ಡ, ಕಾರ್ಯದರ್ಶಿ ಯೋಗೀಶ್ ಯೈಕುರಿ, ಸಂಘದ ಸದಸ್ಯರಾದ ರೂಪನಾಥ ವೈ.ಎಲ್, ಹರೀಶ್ ವೈ ಚಂದ್ರಮ, ರವೀಂದ್ರ ಬಿ ಅಮೀನ್ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.