ಗುರುವಾಯನಕೆರೆಯಲ್ಲಿ ಹ್ಯಾಪಿನೆಸ್ ಡೆಂಟಲ್ ಕೇರ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗುರುವಾಯನಕೆರೆ; ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಪಣತ್ತಿರ್ ಮಾಲ್ ಮೊದಲ ಮಹಡಿಯಲ್ಲಿ ಹ್ಯಾಪಿನೆಸ್ ಡೆಂಟಲ್ ಕೇರ್ ಹಲ್ಲಿನ ವೈದ್ಯರ ಕ್ಲಿನಿಕ್ ಫೆ.೬ ರಂದು ಶುಭಾರಂಭಗೊಂಡಿತು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ವೇಣುಗೋಪಾಲ ಶರ್ಮ ಉದ್ಘಾಟಿಸಿದರು.
ಲೈವ್ ಮೀಡಿಯಾ ನ್ಯೂಸ್ ಪ್ರಿನ್ಸಿಪಲ್ ಎಡಿಟರ್ ಅಶ್ರಫ್ ಆಲಿಕುಂಞಿ ಮುಂಡಾಜೆ, ಕುವೆಟ್ಟು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ನಾರಾಯಣ ಕುಲಾಲ್, ಜಿ.ಪಂ ಸದಸ್ಯೆ ಮಮತಾ ಎಂ ಶೆಟ್ಟಿ, ತಾ.ಪಂ ಸದಸ್ಯ ಗೋಪಿನಾಥ ನಾಯಕ್, ಪಣತ್ತಿರ್ ಮಾಲ್ ಕಟ್ಟಡದ ಮಾಲಿಕ ಅಬ್ದುಲ್ ರಶೀದ್, ಸುಪ್ರಿಂ ಸೋಫಾ ಮಾರ್ಟ್ ಫರ್ನಿಚರ್ಸ್ ಮತ್ತು ಇಲೆಕ್ಟ್ರಾನಿಕ್ಸ್ ಮಾಲಕ ಝುಬೈರ್, ಕಿಶೋರ್ ಮೊದಲಾದವರು ಅತಿಥಿಗಳಾಗಿದ್ದು ಶುಭಕೋರಿದರು.
ಸಂಸ್ಥೆಯ ವೈದ್ಯೆ ಡಾ. ಹೈಮಾ ಪಿ.ಎಸ್, ಗುರುವಾಯನಕೆರೆ ಕೆನರಾ ಬ್ಯಾಂಕ್ ಮೆನೇಜರ್ ಆಗಿರುವ ಸಹೋದರಿ ನೀನು ಪಿ.ಎಸ್, ತಂದೆ ಶಶೀಂದ್ರನ್, ತಾಯಿ ಉಷಾ ಶಶೀಂದ್ರನ್ ಆಹ್ವಾನಿತ ಬಂಧುಗಳನ್ನು ಬರಮಾಡಿಕೊಂಡು ಗೌರವಿಸಿದರು. ಆನಂದ ಕೋಟ್ಯಾನ್ ಕಾರ್ಯಕ್ರಮ ಸಂಯೋಜಿಸಿ,
ಗಂಗಾಧರ ಆಚಾರ್ಯ ಬಳಂಜ ಧನ್ಯವಾದವಿತ್ತರು.

ಡೆಂಟಲ್ ಕೇರ್ ಉದ್ಘಾಟನೆ ಸಮಾರಂಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ವೇಣುಗೋಪಾಲ ಶರ್ಮ ಅವರನ್ನು ಸನ್ಮಾನಿಸಲಾಯಿತು.

ಹ್ಯಾಪಿನೆಸ್ ಡೆಂಟಲ್ ಕೇರ್‌ನ ಡಾಕ್ಟರ್ ಹೈಮಾ ಪಿ.ಎಸ್ ಅವರು ಬೆಂಗಳೂರಿನಲ್ಲಿ ದಂತ ವೈದ್ಯಕೀಯ ಪದವಿ ಕಲಿತು ಹೈದರಾಬಾದ್‌ನಲ್ಲಿ ವಿಶೇಷ ತರಬೇತಿ ಪಡೆದ ಅನುಭವಿಯಾಗಿದ್ದಾರೆ. ಅವರ ಕ್ಲಿನಿಕ್‌ನಲ್ಲಿ ಹಲ್ಲಿನ ಹುಳುಕು ಚಿಕಿತ್ಸೆ, ಫಿಲ್ಲಿಂಗ್, ರೂಟ್‌ಕೆನಲ್, ಹಲ್ಲು ಕೀಳುವುದು, ಹಲ್ಲಿನ ಸೆಟ್ ಜೋಡನೆ, ವಕ್ರದಂತ ಚಿಕಿತ್ಸೆ, ಚಿಕ್ಕ ಮಕ್ಕಳ ಹಲ್ಲಿನ ಚಿಕಿತ್ಸೆಗಳು ಇತ್ಯಾದಿ ಸೇವೆ ಲಭ್ಯವಿದೆ. ಜೊತೆಗೆ ಹಲ್ಲಿನ ಸರ್ಜನ್ ವೈದ್ಯ ಡಾ. ಸ್ಟೇನ್ಲಿ ಅವರೂ ಸಂದರ್ಶನಕ್ಕೆ ಲಭ್ಯರಿದ್ದಾರೆ ಎಂದು ಅವರು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.