ಬೆಳ್ತಂಗಡಿ: ಕರಾವಳಿಯ ಹಲವಾರು ಪ್ರತಿಭಾವಂತ ಯುವಕರು ಸೇರಿಕೊಂಡು ಕನಸ ಬೆನ್ನೇರಿ ಶ್ರಮವಹಿಸಿ ಚಿತ್ರ ನಿರ್ಮಿಸಿದ್ದಾರೆ. ಈ ಸಿನೆಮಾದಲ್ಲಿ ಬಹುತೇಕ ಬೆಳ್ತಂಗಡಿ ತಾಲೂಕಿನ ಯುವಕರು ಕಾರ್ಯನಿರ್ವಹಿಸಿದ್ದು, ಸಿನೆಮಾದಲ್ಲಿ ಬೆಳ್ತಂಗಡಿಯ ರಮಣೀಯ ದೃಶ್ಯಾವಳಿಯನ್ನು ಹಾಗೂ ಬೆಂಗಳೂರು, ಹಾಸನ ಮುಂತಾದ ಭಾಗಗಳಲ್ಲಿ ಚಿತ್ರೀಕರಿಸಲಾಗಿದೆ.
ಬೆಳ್ತಂಗಡಿಯ ಸ್ಮಿತೇಶ್ ಎಸ್ ಬಾರ್ಯ, ನಿರ್ದೇಶನದ ಈ ಚಿತ್ರಕ್ಕೆ ನವೀನ್ ಪೂಜಾರಿ ಕಥೆ ಇದೆ. ಕಾಮಿಡಿ ಕಿಲಾಡಿ ಅನೀಶ್ ಪೂಜಾರಿ ವೇಣೂರು ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ಸಂತೋಷ್ ಆಚಾರ್ಯ ಗುಂಪಲಾಜೆ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರಕ್ಕೆ ಖ್ಯಾತ ಹಿನ್ನೆಲೆ ಗಾಯಕಿ ಮಾನಸಹೊಳ್ಳ ಸಂಗೀತದ ಇಂಪು ನೀಡುತ್ತಿದ್ದಾರೆ. ಸಿನೆಮಾಗಳ ಗೀತೆಗೆ ಖ್ಯಾತ ನಿರ್ದೆಶಕ ಕವಿರಾಜ್, ಭರಾಟೆ ನಿರ್ದೇಶಕ ಚೇತನ್, ಸಾಹಿತಿ ಡಾ.ನಾಗೇಂದ್ರಪ್ರಸಾದ್, ಸುಕೇಶ್ ಇವರುಗಳು ಕನಸಿನ ಹಾಡಿಗೆ ಸಾಹಿತ್ಯದ ಸಾಥ್ ನೀಡಿದ್ದಾರೆ.
ನಾಯಕನಾಗಿ ಪ್ರಜ್ಞೇಶ್ ಶೆಟ್ಟಿ, ನಾಯಕಿ ಸ್ವಸ್ತಿಕ ಪೂಜಾರಿ, ನವ್ಯ ಪೂಜಾರಿ, ಮಿಂಚಿದ್ದಾರೆ. ಮಾನಸ ಹೊಳ್ಳರವರ ಸಂಗೀತವಿರುವ ಈ ಚಿತ್ರಕ್ಕೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್, ಗಾಯಕಿ ವಾಣಿ ಹರಿಕೃಷ್ಣ, ಶಶಾಂಕ್, ಶ್ರೀ ಹರ್ಷ ಧ್ವನಿಯಾಗಿದ್ದಾರೆ.