ಚಾರ್ಮಾಡಿ: ಚಾರ್ಮಾಡಿ ಗ್ರಾಮದ ಲಕ್ಷ್ಮೀ ನಿವಾಸ ಶಂಕರನಾರಾಯಣ ರಾವ್ ರವರ ಧರ್ಮಪತ್ನಿ ವರಲಕ್ಷ್ಮೀ ರಾವ್(62.ವ) ಹೃದಯಾಘಾತದಿಂದ ಫೆ.8 ರಂದು ನಿಧನರಾದರು.
ಫೆ.7 ರಂದು ಮನೆ ದೈವಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಕುಂಡೊಟ್ಟು ಎಂಬಲ್ಲಿ ಹೋಗಿದ್ದರು. ಅಲ್ಲಿ ಅವರಿಗೆ ಸ್ವಲ್ಪ ಅಸೌಖ್ಯ ಕಾಣಿಸಿಕೊಂಡಾಗ, ಪುತ್ರರಾದ ಪವನ್ಕುಮಾರ್, ನಿತಿನ್ ಕುಮಾರ್ ಸೇರಿ ಕಕ್ಕಿಂಜೆ ಖಾಸಗಿ ಆಸ್ಪತ್ರೆ ಕರೆತಂದಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದಾಗ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.
ಮೃತರು ಪತಿ ಶಂಕರನಾರಾಯಣ ರಾವ್, ಓರ್ವ ಪುತ್ರಿ ಭವ್ಯ, ಇಬ್ಬರು ಪುತ್ರರಾದ ಪವನ್ ಕುಮಾರ್, ನಿತಿನ್ ಕುಮಾರ್, ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.