ವೀರ ಪುರುಷರು ಹಾಗೂ ಬಿಲ್ಲವ ಸಮಾಜದ ಅವಹೇಳನ: ತಾಲೂಕು ಯುವ ಬಿಲ್ಲವ ವೇದಿಕೆಯಿಂದ ಖಂಡನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
 ರಂಜಿತ್ ಹೆಚ್.ಡಿ ಬಳಂಜ

ಬೆಳ್ತಂಗಡಿ :ತುಳುನಾಡಿನಲ್ಲಿ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಲ್ಲಿ ಸರ್ವ ಜಾತಿ ಜನಾಂಗದವರು ಆರಾಧಿಸಿಕೊಂಡು ಬರುತ್ತಿರುವ ಕಾರ್ಣಿಕದ ಅವಳಿ ವೀರ ಪುರುಷರಾದ ಕೋಟಿ ಚೆನ್ನಯರ ಬಗ್ಗೆ ಹಾಗೂ ಬಿಲ್ಲವ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮೂಡಬಿದಿರೆಯ ರಾಜಕಾರಣಿ ಜಗದೀಶ್ ಅಧಿಕಾರಿಯ ಅತಿರೇಕದ ವರ್ತನೆಯನ್ನು ಬೆಳ್ತಂಗಡಿ ತಾಲೂಕು ಯುವ ಬಿಲ್ಲವ ವೇದಿಕೆ ತೀವ್ರವಾಗಿ ಖಂಡಿಸುತ್ತದೆ.
ಹಿರಿಯರ ಕಾಲು ಹಿಡಿದು ಆಶೀರ್ವಾದ ಪಡೆಯುವುದು ಭಾರತೀಯ ಸಂಸ್ಕೃತಿ. ಆದರೆ ಜಗದೀಶ್ ಅಧಿಕಾರಿ ತಮ್ಮ ಭಾಷಣದಲ್ಲಿ ಬಿಲ್ಲವ ಸಮಾಜದ ಮುಖಂಡ, ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿ ಬಗ್ಗೆ ಅವಹೇಳನ ಮಾತುಗಳನ್ನಾಡಿದ್ದಾರೆ.
ವೀರ ಪುರುಷರನ್ನು ಸರ್ವರು ಅರಾಧಿಸಿ ಗೌರವ ಅರ್ಪಿಸುತ್ತಿರುವಾಗ ಇತಿಹಾಸ ತಿಳಿಯದ ರಾಜಕಾರಣಿಯೊಬ್ಬ ಕೋಟಿ ಚೆನ್ನಯರ ಬಗ್ಗೆ ತೀರಾ ಕೆಟ್ಟದಾಗಿ ಮಾತಾನಾಡಿರುವುದು ಖಂಡನೀಯ. ವೀರ ಪುರುಷರಾದ ಕೋಟಿ ಚೆನ್ನಯರು, ಬಿಲ್ಲವ ಮುಖಂಡರು, ಹಿಂದೂ ಸಮಾಜದ ಬಗ್ಗೆ ಅಪಮಾನ ಮಾಡಿದ ಜಗದೀಶ್ ಅಧಿಕಾರಿ ಮೇಲೆ ಸರಕಾರ ಕಾನೂನು ಕ್ರಮ ಜರುಗಿಸಬೇಕೆಂದು ಬೆಳ್ತಂಗಡಿ ತಾಲೂಕು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ರಂಜಿತ್ ಹೆಚ್.ಡಿ ಬಳಂಜ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.