ಮಡಂತ್ಯಾರಿನಲ್ಲಿ ಸಾಕು ನಾಯಿಗಳಿಗೆ ಉಚಿತ ರೋಗ ನಿರೋಧಕ ಲಸಿಕೆ

ಮಡಂತ್ಯಾರು: ದ.ಕ ಜಿ.ಪಂ ಮಂಗಳೂರು, ಪಶುಸಂಗೋಪಣಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಬೆಳ್ತಂಗಡಿ ಮತ್ತು ಗ್ರಾ.ಪಂ ಮಡಂತ್ಯಾರು ಇದರ ಆಶ್ರಯದಲ್ಲಿ ಮಡಂತ್ಯಾರು ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಕಡೆಗಳಲ್ಲಿ ಸಾಕು ನಾಯಿಗಳಿಗೆ ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮ ಫೆ.8 ರಂದು ನಡೆಯಿತು.

ಕಾರ್ಯಕ್ರಮವನ್ನು ತಾ.ಪಂ ಸದಸ್ಯೆ ವಸಂತಿ ಲಕ್ಷ್ಮಣ ಕುಲಾಲ್ ನೆರವೇರಿಸಿದರು. ಗ್ರಾ.ಪಂ ಆಡಳಿತಾಧಿಕಾರಿ ಯತೀಶ್ ಎಂ. ಯಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಡಂತ್ಯಾರು ಪಶು ಚಿಕಿತ್ಸಾಲಯದ ಹಿರಿಯ ಪಶುವೈದ್ಯಾಧಿಕಾರಿ ಡಾ. ವಿನಯ ಕುಮಾರ್ ಎಸ್. ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು.


ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರುಗಳಾದ ಹರಿಪ್ರಸಾದ್ ಶೆಟ್ಟಿ, ಉಮೇಶ್ ಸುವರ್ಣ, ಸಂಗೀತ ಶೆಟ್ಟಿ, ಮೋಹಿನಿ, ರೂಪ ಎ.ಯಸ್, ಜಾನುವಾರು ಅಧಿಕಾರಿ ಸುಕೀರ್ತಿ, ಪಶುವೈದ್ಯಕೀಯ ಪರೀಕ್ಷಕರಾದ ರಮೇಶ್, ಸದಾಶಿವ ಭಟ್, ಸಚಿನ್ ಎನ್.ಎಂ, ಆಶಾ ಕಾರ್ಯಕರ್ತೆಯರಾದ ಹೇಮಲತಾ ಶೆಟ್ಟಿ, ಉಷಾ ಪಾಟೀಲ್, ಗ್ರಾ.ಪಂ ಸಿಬ್ಬಂದಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.

ಪಂಚಾಯತ್ ಅಭಿವೃದ್ದಿ ಅಧಿಕಾರಿ ಪುರುಷೋತ್ತಮ ಜಿ. ಕಾರ್ಯಕ್ರಮ ನಿರೂಪಿಸಿ, ಗ್ರಾ.ಪಂ ಸದಸ್ಯ ವಿಶ್ವನಾಥ ಪೂಜಾರಿ ಧನ್ಯವಾದವಿತ್ತರು. ಮಡಂತ್ಯಾರು ಗ್ರಾ.ಪಂ ವ್ಯಾಪ್ತಿಯಲ್ಲಿ ೧೯ ಸ್ಥಳಗಳಲ್ಲಿ ಸುಮಾರು ೩೮೦ ನಾಯಿಗಳಿಗೆ ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕೆ ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.