ಉಜಿರೆ: ಇಲ್ಲಿಯ ಮಾಚಾರು ಕೋರ್ಯಾರುಗುತ್ತು ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೈವಸ್ಥಾನದ ನೂತನ ಚಾವಡಿಯಲ್ಲಿ ಶ್ರೀ ವ್ಯಾಘ್ರ ಚಾಮುಂಡೇಶ್ವರೀ ಹಾಗೂ ಸಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸವ ಮತ್ತು ವರ್ಷಾವಧಿ ದೊಂಪದ ಬಲಿ ಉತ್ಸವ ಫೆ.16 ರಿಂದ 18ರವರೆಗೆ ವೈದಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಜಿ. ಗೋಪಾಲಕೃಷ್ಣ ಉಪಾಧ್ಯಾಯ ಹೇಳಿದರು.
ಅವರು ಫೆ.8 ರಂದು ಕೋರ್ಯಾರುಗುತ್ತುವಿನಲ್ಲಿ ಕರೆದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದರು. ಜೈನ ಮನೆತನದವರು 200 ವರ್ಷಗಳಿಂದ ಆರಾಧಿಸಲ್ಪಡುತ್ತಿದ್ದ ದೈವ ಮತ್ತು ನಾಗ ಸಾನಿಧ್ಯಗಳನ್ನು ಕಳೆದ 20 ವರ್ಷಗಳಿಂದ ಊರವರ ಸಹಕಾರದಿಂದ ವಾರ್ಷಿಕ ಉತ್ಸವ ನಡೆದುಕೊಂಡು ಬರುತ್ತಿದ್ದು ದೈವಜ್ಞರಿಂದ ಪ್ರಶ್ನೆ ಇಡಿಸಿ ಚಿಂತಿಸಿದಾಗ ಎಲ್ಲಾ ದೈವ ಸಾನಿಧ್ಯಗಳನ್ನು ಸಮಗ್ರ ಜೀರ್ಣೋದ್ಧಾರ ಮಾಡಿ ಪೂರ್ವವತ್ ಸ್ಥಾಪಿಸಬೇಕೆಮದು ಕಂಡುಬಂದ ಹಿನ್ನೆಲೆಯಲ್ಲಿ ಗುತ್ತಿನಮನೆಯ ಚಾವಡಿಯಲ್ಲಿ ಆರಾಧಿಸಲ್ಪಡುತ್ತಿದ್ದ ವ್ಯಾಘ್ರಚಾಮುಮಡಿ, ಪಂಜುರ್ಲಿ ಧೂಮಾವತಿ ಉಳ್ಳಾಕ್ಲು ಹಾಗೂ ರಕ್ತೇಶ್ವರಿ ದೈವಗಳಿಗೆ ನೂತನ ಚಾವಡಿ ನಿರ್ಮಿಸಲಾಗಿದೆ. ಕಲ್ಕುಡ-ಕಲ್ಲುರ್ಟಿಯ ಹಾಗೂ ಬಿರ್ಮೇರು ಮತ್ತು ಗುಳಿಗ ದೈವವನ್ನು ಪ್ರತ್ಯೇಕ ಪ್ರತಿಷ್ಠಾಪಿಸಬೇಕೆಂಬ ಕೋರ್ಯಾರು ಪರಿಸರದ ಸಮಸ್ತ ಭಕ್ತಾಧಿಗಳು ಒಟ್ಟು ಸೇರಿ ಸುಮಾರು ರೂ.70 ಲಕ್ಷ ಮೊತ್ತದ ದೈವಗಳ ಚಾವಡಿ ನಿಮಿಸಲಾಗಿದೆ.
ಫೆ.15 ರಂದು ಸ್ಥಳೀಯ ಪರಿಸರದವರಿಂದ ಹೊರೆಕಾಣಿಕೆ ಸಮರ್ಪಣೆ, ಫೆ.16 ರಂದು ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, 24 ನಾಳಿಕೇರ ಗಣಯಾಗ, ಬಳಿಕ ಕಛೇರಿ ಉದ್ಘಾಟನೆ, ಅನ್ನಛತ್ರ ಉದ್ಘಾಟನೆ, ಹಸಿರುವಾಣಿ ಉಗ್ರಾಣ ಉದ್ಘಾಟನೆ ನಡೆಯಲಿದೆ. ಬಳಿಕ ಕೋರ್ಯಾರು ನಾಗಬನದಲ್ಲಿ ಆಶ್ಲೇಷಬಲಿ, ತಂಬಿಲ ಸೇವೆ, ಸ್ಥಳದ ನಾಗದೇವರಿಗೆ ನಾಗತಂಬಿಲ, ಪವಮಾನ ಹೋಮ, ವಾಸ್ತುಪೂಜೆ, ವಾಸ್ತುಬಲಿ ಸುದಶನ ಹೋಮ, ಕಲಶ ಪ್ರತಿಷ್ಠೆ, ಕಲಶಾಭಿಷೇಕ ಹೋಮ, ದುರ್ಗಾಪೂಜೆ, ಫೆ.17 ರಂದು ಬೆಳಿಗೆ ನೂತನ ಛಾವಡಿಯಲ್ಲಿ ದೈವಗಳ ಪ್ರತಿಷ್ಠೆ ಬಳಿಕ ಗಣಪತಿ ಹೋಮ, ಪ್ರತಿಷ್ಠಾ ಹೋಮ, ಚಂಡಿಕಾಯಾಗ, ಸಾಯಂಕಾಲ ದೈವಗಳ ನೇಮೋತ್ಸವ ನಡೆಯಲಿದೆ.
ಫೆ.18ರಂದು ವರ್ಷಾವಧಿ ಪರ್ವ, ತಂಬಿಲಸೇವೆ, ಸಂಜೆ ವರ್ಷಾವಧಿ ದೊಂಪದಬಲಿ ಭಂಡಾರ ಹೊರಡುವುದು, ರಾತ್ರಿ ವಾರ್ಷಿಕ ನೇಮೋತ್ಸವ ಜರುಗಲಿದೆ. ಪ್ರತಿನಿತ್ಯ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ ಎಂದರು.
ಪತ್ರಿಕಾಗೊಷ್ಠಿಯಲ್ಲಿ ಪ್ರತಿಷ್ಠಾನ ಸಂಚಾಲಕ ಆಡಳಿತ ಸಮಿತಿಯ ಅಧ್ಯಕ್ಷ ರಾಮಯ್ಯ ಗೌಡ, ಪ್ರತಿಷ್ಠಾ ಮಹೋತ್ಸವ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಅಣ್ಣಿ ಪೂಜಾರಿ ಪಡ್ಪು, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಕೇಶವ ಗೌಡ ಕೋರ್ಯಾರು ಉಪಸ್ಥಿತರಿದ್ದರು.