ಮಲೆಬೆಟ್ಟು: ಕೊಯ್ಯೂರು ಗ್ರಾಮದ ಬದಿನಡೆ ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಫೆ. 8ರಿಂದ 12ರವರೆಗೆ ನಡೆಯಲಿದ್ದು, ಇದರ ಪ್ರಯುಕ್ತ ಇಂದು (ಫೆ. 8) ದೇವತಾ ಪ್ರಾರ್ಥನೆ, ಶ್ರೀ ಗಣಯಾಗ, ತೋರಣ ಮುಹೂರ್ತ, ಶ್ರೀ ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ಪ್ರಸನ್ನ ಪೂಜೆ, ಅನ್ನಸಂತರ್ಪಣೆ, ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ, ಪ್ರಸನ್ನ ಪೂಜೆ ಜರುಗಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸ್ವರ ಕಾಂತಾಜೆ ಈಶ್ವರ ಭಟ್, ಪ್ರಧಾನ ಅರ್ಚಕರಾದ ಅಶೋಕ್ ಭಟ್ ಮತ್ತು ಅರ್ಚಕ ವೃಂದ, ಊರ ಗಣ್ಯರು, ಊರ-ಪರವೂರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಇಂದು ರಾತ್ರಿ ಭಜನೆ, ರಂಗಪೂಜೆ, ಶ್ರೀ ದೇವಿ ಉತ್ಸವ, ನಿತ್ಯಬಲಿ ನಡೆಯಲಿದೆ. ಫೆ.9 ರಂದು ಬೆಳಿಗ್ಗೆ ಶ್ರೀದೇವಿ ಉತ್ಸವ, ದರ್ಶನ ಬಲಿ, ಕಲಶಾಭಿಷೇಕ, ಪ್ರಸನ್ನ ಪೂಜೆ, ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ, ಅನ್ನಸಂತರ್ಪಣೆ, ರಾತ್ರಿ 7ರಿಂದ ಭಕ್ತಿಗಾನ, ಯಕ್ಷ ನೃತ್ಯ, ರಾತ್ರಿ 8.30ರಿಂದ ಶ್ರೀದೇವಿ ಉತ್ಸವ, ಪ್ರಸನ್ನ ಪೂಜೆ, ಭೂತಬಲಿ, ಶಯನೋತ್ಸವ, ಕವಾಟ ಬಂಧನ ನಡೆಯಲಿದೆ.
ಫೆ.10 ರಂದು ಕವಾಟ ಉದ್ಘಾಟನಾ, ಕಲಶಾಭಿಷೇಕ, ಚೂರ್ಣೋತ್ಸವ, ಬಟ್ಟಲು ಕಾಣಿಕೆ, ಮಧ್ಯಾಹ್ನ ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ಭಂಡಾರದ ಆಗಮನ, ರಾತ್ರಿ ಶ್ರೀ ದೇವಿಯ ಅವಭೃತ, ಧ್ವಜಾವರೋಹಣ, ಅತಿಥಿ ಕಲಾವಿದರಿಂದ ಯಕ್ಷಗಾನ, ರಾತ್ರಿ 12ರಿಂದ ಶ್ರೀ ಧರ್ಮದೈವಗಳ ನೇಮೋತ್ಸವ ನಡೆದು ಫೆ.11 ರಂದು ಶ್ರೀ ಭಂಡಾರದ ನಿರ್ಗಮನ, ಸಂಪ್ರೋಕ್ಷಣೆ, ರಾತ್ರಿ 8 ರಿಂದ ಮೂಲಸ್ಥಾನ ಕಳೆಂಜ ಗುತ್ತು ದೈವಸ್ಥಾನದಲ್ಲಿ ಧರ್ಮದೈವ ನೇಮೋತ್ಸವ ನಡೆಯಲಿದೆ ಫೆ.12 ರಂದು ಶ್ರೀ ಕಲಶಾಭಿಷೇಕ, ಮಧ್ಯಾಹ್ನ 12.30 ರಿಂದ ದೇವಾಲಯದಲ್ಲಿ ಸಂಕ್ರಾಂತಿ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ .