ಕಡಿರುದ್ಯಾವರ: ಇಲ್ಲಿಯ ಕಡಿರುದ್ಯಾವರ ಗ್ರಾಮ ಪಂಚಾಯತದ ನೂತನ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಮಠ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಬೇಬಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಡಿರುದ್ಯಾವರ ಗ್ರಾ.ಪಂನಲ್ಲಿ ಫೆ.8 ರಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಇವರುಗಳು ಚುನಾವಣಾಧಿಕಾರಿ ಶಕುಂತಳಾ ಶೆಣೈ ರವರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಕಡಿರುದ್ಯಾವರ ಗ್ರಾಮ ಪಂಚಾಯತ್ನ 9 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 8 ಸ್ಥಾನಗಳನ್ನು ಬಿಜೆಪಿ ಬೆಂಬಲಿತರ ಪಡೆದುಕೊಂಡು ಪಂಚಾಯತದ ಅಧಿಕಾರವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಕಡಿರುದ್ಯಾವರ ವಾರ್ಡ್-2 ವಾರ್ಡ್ನಲ್ಲಿ ಹಿಂದುಳಿದ ವರ್ಗ ಎ ಸ್ಥಾನದಿಂದ ಅಶೋಕ್ ಕುಮಾರ್ ಹಾಗೂ ಕಡಿರುದ್ಯಾವರ ವಾರ್ಡ್-3ರಲ್ಲಿ ಪ.ಜಾತಿ ಕ್ಷೇತ್ರದಿಂದ ಶ್ರೀಮತಿ ಬೇಬಿ ರವರು ಸ್ಪರ್ಧಿಸಿ ಜಯಶಾಲಿಗಳಾಗಿದ್ದರು.