ಗ್ರಾಹಕರಿಗೆ ಸ್ಪಂದಿಸದ ಕಕ್ಕಿಂಜೆ ಕೆನರಾ ಬ್ಯಾಂಕ್ ಸಿಬ್ಬಂದಿಗಳು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಚಾರ್ಮಾಡಿ, ಕಕ್ಕಿಂಜೆ, ಚಿಬಿದ್ರೆ, ತೋಟತ್ತಾಡಿ ನೆರಿಯ, ಮುಂಡಾಜೆ ಗ್ರಾಮಸ್ಥರಿಂದ ಬ್ಯಾಂಕಿನೆದುರು ಪ್ರತಿಭಟನೆ



ಕಕ್ಕಿಂಜೆ: ಕಕಿಂಜೆಯಲ್ಲಿ ಕಾರ್ಯಾಚರಿಸುತ್ತಿರು ಕೆನರಾ ಬ್ಯಾಂಕ್‌ನ ಸಿಬ್ಬಂದಿಗಳು ಗ್ರಾಹಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಚಾರ್ಮಾಡಿ, ಕಕ್ಕಿಂಜೆ, ಚಿಬಿದ್ರೆ,ತೋಟತ್ತಾಡಿ ನೆರಿಯ, ಮುಂಡಾಜೆ ಗ್ರಾಮಸ್ಥರಿಂದ ಕೆನರಾ ಬ್ಯಾಂಕ್ ಶಾಖೆಯ ಮುಂಭಾಗದಲ್ಲಿ ಫೆ.8 ರಂದು ಬೃಹತ್ ಪ್ರತಿಭಟನೆ ನಡೆಯಿತು.

ಬ್ಯಾಂಕ್ ವ್ಯವಹಾರಕ್ಕೆ ಬರುತ್ತಿರುವ ಚಾರ್ಮಾಡಿ, ಕಕ್ಕಿಂಜೆ, ಚಿಬಿದ್ರೆ, ತೋಟತ್ತಾಡಿ, ನೆರಿಯ, ಮುಂಡಾಜೆ ಗ್ರಾಮದ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಇಲ್ಲಿರುವ ಸಿಬ್ಬಂದಿಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಗ್ರಾಹಕರೊಂದಿಗೆ ವ್ಯವಹರಿಸುತ್ತಿದ್ದು, ಕನ್ನಡ, ತುಳು ಭಾಷೆಯನ್ನಷ್ಟೇ ಅರಿತಿರುವ ಗ್ರಾಹಕರು ಮಾಹಿತಿಯಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಅನೇಕ ಬಾರಿ ಕೇಂದ್ರ ಕಛೇರಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಉಳಿತಾಯ ಖಾತೆಯ ಎಂಟ್ರಿಗಳು ಸಮರ್ಪಕವಾಗಿ ಆಗುತ್ತಿಲ್ಲ ಹಾಗೂ ಎಟಿಎಂ ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

ಆದುದರಿಂದ ಶೀಘ್ರವೇ ಕೆನರಾ ಬ್ಯಾಂಕ್ ಕಕ್ಕಿಂಜೆ ಕಛೇರಿಗೆ ಸ್ಥಳೀಯ ಭಾಷೆಯನ್ನು ಅರಿತಿರುವ ಸಿಬ್ಬಂದಿಗಳನ್ನು ನೇಮಕಗೊಳಿಸಿ ಬ್ಯಾಂಕ್ ವ್ಯವಹಾರಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.