ಡಾ. ಹೆಗ್ಗಡೆಯವರಿಂದ ‘ಮಂಗಳಗಂಗೋತ್ರಿ ಪರಿಸರದ ಶ್ರದ್ಧಾ ಕೇಂದ್ರಗಳು ಕೃತಿ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ಉಜಿರೆ: ಮಂಗಳೂರು ವಿ.ವಿ.ಯ ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ತರಗತಿಯ ಅಂತಿಮ ವರ್ಷದ ವಿದ್ಯಾರ್ಥಿನಿ ಉಜಿರೆಯ ಅಭಿಜ್ಞಾ ಉಪಾಧ್ಯಾಯ ರವರು ಬರೆದ “ಮಂಗಳ ಗಂಗೋತ್ರಿ ಪರಿಸರದ ಶ್ರದ್ಧಾ ಕೇಂದ್ರಗಳು”ಎಂಬ ಕೃತಿಯನ್ನು  ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ  ಹಾರೈಸಿ ದರು.
ಈ ಸಂದರ್ಭದಲ್ಲಿ ಉಜಿರೆ ಎಸ.ಡಿ.ಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ವೈ ಉಮಾನಾಥ ಶೆಣೈ ಉಪಸ್ಥಿತರಿದ್ದರು. ಮಂಗಳ ಗಂಗೋತ್ರಿಯ ಪ್ರಾಧ್ಯಾಪಕಿ  ಡಾ. ತ್ರಿವೇಣಿ ಅರಸ್  ಕೃತಿ ಪ್ರಕಟಿಸಿದ್ದು  ಡಾ. ವೈ ಉಮಾನಾಥ ಶೆಣೈ  ಮಾರ್ಗದರ್ಶನ ನೀಡಿದ್ದಾರೆ.  ಮಂಗಳ ಗಂಗೋತ್ರಿ ಪರಿಸರದ ಸುಮಾರು 25  ದೇವಸ್ಥಾನ ,ದೈವಸ್ಥಾನ ಹಾಗು ಬಸದಿಗಳ ಮಾಹಿತಿಗಳನ್ನೊಳಗೊಂಡ  ಕೃತಿ ಧಾರ್ಮಿಕ ಆಸಕ್ತರಿಗೆ ಸಂಗ್ರಾಹ್ಯವಾಗಿದೆ.
ಅಭಿಜ್ಞಾ ಉಪಾಧ್ಯಾಯ ರವರು ಉಜಿರೆಯ  ಉಮೇಶ್ ಜಿ.ಉಪಾಧ್ಯಾಯ  ಮತ್ತು ಶಾಂತಾ ಯು. ಉಪಾಧ್ಯಾಯ ದಂಪತಿ ಪುತ್ರಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.