
ಸುಲ್ಕೇರಿಮೊಗ್ರು: ಭಾರತೀಯ ವಾಯುಸೇನೆಗೆ ಸುಲ್ಕೇರಿ ಮೊಗ್ರುವಿನ ಸೂರಜ್ ಮಡಿವಾಳ ಆಯ್ಕೆಯಾಗಿದ್ದಾರೆ. ಇವರು ಭಾರತೀಯ ವಾಯುಸೇನೆ ಶಿವಮೊಗ್ಗದಲ್ಲಿ ನಡೆಸಿದ ರಾಲಿಯಲ್ಲಿ ತೇರ್ಗಡೆ ಹೊಂದಿ, ಬೀದರ್ ನಲ್ಲಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಟ್ಟು, ಬೆಂಗಳೂರಿನಲ್ಲಿ ಜಾಯಿನಿಂಗ್ ಮೆಡಿಕಲ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ್ದಾರೆ ಹಾಗೂ ಚೆನ್ನೈನಲ್ಲಿ ನಡೆಯಲಿರುವ ತರಬೇತಿಯಲ್ಲಿ ಭಾಗವಹಿಸಲಿದ್ದಾರೆ.
ವಾಯುಸೇನೆಗೆ ಸೇರಬೇಕೆಂದು ಬಾಲ್ಯದಿಂದಲೂ ಕನಸು ಕಾಣುತ್ತಿದ್ದ ಸೂರಜ್ ಕಳೆದ ವರ್ಷ ಸೈನ್ಯ ಸೇರುವ ಅವಕಾಶದಿಂದ ಕೊನೆಯ ಕ್ಷಣದಲ್ಲಿ ವಂಚಿತರಾಗಿದ್ದರು. ಸದಾ ಚಟುವಟಿಕೆಯಿಂದಿರುವ ಸೂರಜ್ ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಗಳ ಮೂಲಕ ನಾಯಕತ್ವವನ್ನು ಮೈಗೂಡಿಸಿಕೊಂಡಿದ್ದರು.
ಸುಲ್ಕೇರಿ ಮೊಗ್ರು ಗ್ರಾಮದ ಬೇಬಿ ಸಾಲ್ಯಾನ್ ಮತ್ತು ಉಮಾವತಿ ದಂಪತಿ ಪುತ್ರರಾಗಿರುವ ಇವರು ಪ್ರಸ್ತುತ ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ತೃತೀಯ ವರ್ಷದ ವಿದ್ಯಾರ್ಥಿ.