ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಸ್ನಾನ ಘಟ್ಟದಿಂದ ದೇವಸ್ಥಾನದ ಮಹಾಧ್ವಾರ – ಕಲ್ಲೇರಿಯವರೆಗಿನ ಚತುಷ್ಷಥ ರಸ್ತೆ ನಿಮಾ೯ಣ ಕಾಮಗಾರಿಯನ್ನು ಲೋಕಾಪ೯ಣೆ ಗೈಯ್ಯಲಿರುವ ಉಪಮುಖ್ಯ ಮಂತ್ರಿ ಹಾಗೂ ಲೋಕೋಪಯೋಗಿ ಇಲಾಖಾ ಸಚಿವ ಗೋವಿಂದ ಎಂ. ಕಾರಜೋಳ ಫೆ.7ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದಶ೯ನ ಪಡೆದರು. ಬಳಿಕ ಧಮ೯ಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಬಿಜೆಪಿ ಮಂಡಲದ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಶ್ರೀ ನಿವಾಸ ರಾವ್, ಪುತ್ತೂರು ಎ.ಸಿ ಯತೀಂದ್ರ ಉಳ್ಳಾಲ್., ತಹಶೀಲ್ದಾರ್ ಮಹೇಶ್ ಜೆ, ಕಾಯ೯ನಿವ೯ಹಕ ಇಂಜಿನಿಯರ್ ಶಿವಪ್ರಸಾದ್ ಅಜಿಲ ಮೊದಲಾದವರು ಉಪಸ್ಥಿತರಿದ್ದರು.