ಬೆಳಾಲು: ಇಲ್ಲಿಯ ಶ್ರೀ ಮಾಯಾ ಮಹಾದೇವ ದೇವಸ್ಥಾನ ಮಾಯಾ ಬೆಳಾಲು ಇದರ ವಾರ್ಷಿಕ ಜಾತ್ರಾ ಮಹೋತ್ಸವ ಫೆ.24ರಿಂದ ಮಾರ್ಚ್1 ರವರೆಗೆ ಜರಗಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಫೆ.5ರಂದು ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹೆಚ್.ಪದ್ಮ ಗೌಡ ಮಾಯಾಗುತ್ತು ಪುಷ್ಪದಂತ ಜೈನ್, ಅರ್ಚಕ ಕೇಶವ ರಾಮಯಾಜಿ, ಶಿವಕುಮಾರ್ ಬಾರಿತ್ತಾಯ ಪಾರಳ, ನಾರಾಯಣ ಸುವರ್ಣ ಮಂಜನೊಟ್ಟು, ಶೇಖರ ಗೌಡ ಕೊಲ್ಲಿಮಾರು, ರಾಧಾಕೃಷ್ಠ ಮಾಯಾ, ಲಕ್ಷಣ ಗೌಡ ಪುಳಿತ್ತಡಿ, ದಾಮೋದರ ಗೌಡ ಸುರುಳಿ, ರಾಜಪ್ಪ ಗೌಡ ಪುಚ್ಚೆಹಿತ್ಲು, ವಸಂತ ಎಂ.ಕೆ ಬಜಕ್ಕಳ, ಗಂಗಯ್ಯ ಗೌಡ ಅದವೂರು, ಮೋನಪ್ಪಗೌಡ ಬೆಳಾಲು, ರಮೇಶ ಪೂಜಾರಿ ಗುಂಡ್ಯ, ದಿನೇಶ ಎಂ.ಕೆ, ನಾರಾಯಣ ಮಡಿವಾಳ, ಕನ್ನಿಕಾ ಪದ್ಮ ಗೌಡ, ಭಾರತಿ ಮಾರ್ಪಾಲು, ಭಕ್ತಾಧಿಗಳು ಉಪಸ್ಥಿತರಿದ್ದರು.