ಗೇರುಕಟ್ಟೆ ಶ್ರೀ ಮಹಾದೇವಿ ಜನರಲ್ ಸ್ಟೋರ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗೇರುಕಟ್ಟೆ: ಇಲ್ಲಿಯ ಹಾಲು ಉತ್ಪಾದಕರ ಸಂಘದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿದ ಕಟ್ಟಡದಲ್ಲಿ  ಶ್ರೀ ಮಹಾದೇವಿ ಜನರಲ್ ಸ್ಟೋರ್ ಫೆ.5 ರಂದು ಶುಭಾರಂಭಗೊಂಡಿದೆ. ಮಡಂತ್ಯಾರು ಶ್ರೀ ಗೋಪಾಲ ಕೃಷ್ಣ ತಂತ್ರಿ ನೇತೃತ್ವದಲ್ಲಿ ಗಣಹೋಮ ಮತ್ತು ಅಂಗಡಿ ಪೂಜೆ ನೆರವೇರಿತು. ಹಾಗೂ ಶ್ರೀಮತಿ ಕುಸುಮ ಮತ್ತು ಚಂದಪ್ಪ ಪೂಜಾರಿ ದಂಪತಿಗಳು ದೀಪ ಪ್ರಜ್ವಲಿಸುವ ಮೂಲಕ ಸಂಸ್ಥೆಗೆ ಶುಭ ಹಾರೈಸಿದರು.

ಡಾ.ಅನಂತ ಭಟ್. ಗೇರುಕಟ್ಟೆ, ತಾಲೂಕು ಪಂಚಾಯತು ವ್ಯವಸ್ಥಾಪಕ ಸುವರ್ಣ ಜಿ.ಹೆಗ್ಡೆ, ಗೇರುಕಟ್ಟೆ, ಕಳಿಯ ಸಿಎ ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ನಿರ್ದೇಶಕ ಶೇಖರ ನಾಯ್ಕ, ಶಶಿಧರ್ ಶೆಟ್ಟಿ, ಕಳಿಯ ಪಂಚಾಯತು ಮಾಜಿ ಅಧ್ಯಕ್ಷ ಶರತ್ ಕುಮಾರ್, ಹಾಲಿ ಸದಸ್ಯರಾದ ದಿವಾಕರ ಎಮ್, ವಿಜಯ ಕುಮಾರ್ ಕೆ. ಕುಸುಮ ಎನ್, ಬಂಗೇರ, ಇಂದಿರಾ ಶೆಟ್ಟಿ, ಸುಭಾಷಿಣಿ ಕೆ.ಗೌಡ, ಶ್ವೇತಾ ಶ್ರೀನಿವಾಸ, ಶಕುಂತಲಾ, ಸುಧಾಕರ ಮಜಲು, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ದನ ಗೌಡ ಕೆ,ಉಪಾಧ್ಯಕ್ಷ,ಪಂ.ಸದಸ್ಯ ಯಶೋಧರ ಶೆಟ್ಟಿ ಕೆ, ಮತ್ತು ಸಂಘದ ನಿರ್ದೇಶಕರು, ಸಿಬ್ಬಂದಿಗಳು ,ಎಸ್.ಆರ್ ಶಾಮಿಯಾನ ಮಾಲಕ ಯೋಗೀಶ್ ಕುಮಾರ್ ಅಡ್ಡ ಕೊಡಂಗೆ ಸ್ಥಳೀಯ ಅಂಗಡಿ, ಹೋಟೆಲ್ ವಾಹನ ಮಾಲೀಕರು ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜನರಲ್ ಸ್ಟೋರ್ ಮಾಲಕಿ ಲೋಲಾಕ್ಷಿ ಚಂದ್ರಶೇಖರ ಮೂರ್ತಿ ಮಾತನಾಡುತ್ತಾ ಗ್ರಾಹಕರಿಗೆ ಉತ್ತಮ ಗುಣಮಟ್ಟದ ದಿನಸಿ ಸಾಮಾನುಗಳು ಮತ್ತು ಗ್ರಹಉಪಯೋಗಿ ವಸ್ತುಗಳನ್ನು ಮಿತ ದರದಲ್ಲಿ ನೀಡಲಾಗುತ್ತದೆ ಎಂದು ಹೇಳಿದರು. ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ.ದಂಪತಿಗಳು, ಭಾಗ್ಯವತಿ, ನಾರಾಯಣ ಕೊಟ್ಯಾನ್,ಐಶ್ವರ್ಯ ವಿನಯ ಕುಮಾರ್,ಸಂಭ್ರಮ್,ಆಯುಷ್,ಐಶಾನಿ ಯವರು ಆಗಮಿಸಿದ ಹಿತೈಷಿ, ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.