ಧರ್ಮಸ್ಥಳ: ಇಲ್ಲಿಯ ನೇತ್ರಾವತಿ ಸ್ನಾನಘಟ್ಟದಲ್ಲಿ ಕಿಂಡಿ ಅಣೆಕಟ್ಟಿನ ಸಮೀಪ ಅಪರಿಚಿತ ಮಹಿಳೆಯರಿಬ್ಬರ ಮೃತದೇಹ ಫೆ.4ರಂದು ಬೆಳಿಗ್ಗೆ ಪತ್ತೆಯಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಸ್ನಾನ ಘಟ್ಟದ ನೌಕರರಾಗಿರುವ ಜಯಂತ ರವರು ಗುರುವಾರ ಮುಂಜಾನೆ ಸುಮಾರು 5.30 ರ ಸಮಯದಲ್ಲಿ ನೇತ್ರಾವತಿ ನದಿಯ ಬಳಿ ಕರ್ತವ್ಯಕ್ಕೆ ಹಾಜರಾಗಿದ್ದ ಸಂದರ್ಭ ನೇತ್ರಾವತಿ ನದಿಕೆ ಸ್ನಾನಕ್ಕೆಂದು ಬಂದ ಯಾತ್ರಾರ್ಥಿಗಳು ಕಿಂಡಿ ಅಣೆಕಟ್ಟಿನ ಬಳಿ ಮೃತದೇಹಗಳು ಇರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದು, ಮಹಿಳೆಯರ ಎರಡು ಮಥರಶರೀರ ನೀರಿನಲ್ಲಿ ಕವಚಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಎಂದು ಧರ್ಮಸ್ಥಳ ಠಾಣಾ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.
ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಚಂದ್ರಶೇಖರ ಕೆ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯುಡಿಆರ್ ಅಪರಾಧ ಕ್ರಮಾಂಕ ಮತ್ತು ಕಾನೂನಿನ ಕಲಂ
ಧರ್ಮಸ್ಥಳ ಪೊಲೀಸ್ ಯುಡಿಆರ್ ನಂ: 06/2021 ಕಲಂ:174 ಸಿ ಆರ್ಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿ ಬಿದ್ದಿರಬಹುದೋ ಎಂಬುವುದು ಇನ್ನಷ್ಟೇ ತಿಳಿದುಬರಬೇಕಿದೆ.