ಬೆಳ್ತಂಗಡಿ: ಅಡಿಕೆ ಬೆಳೆಗಾರರಿಗೆ ಇದೋ ಸಂತಸದ ಸುದ್ದಿ. ಹೊಸ ಅಡಿಕೆಗೆ ಮಾರುಕಟ್ಟೆಯಲ್ಲಿ ದಾಖಲೆ ಮಟ್ಟದಲ್ಲಿ ಬೆಲೆ ಏರಿಕೆ ಕಂಡಿದೆ. ಇಂದಿನ ಅಡಿಕೆ ದಾರಣೆ ಕೆ.ಜಿಗೆ ರೂ.400.
ಉತ್ತರ ಭಾರತದಿಂದ ಅಡಿಕೆಗೆ ಭಾರೀ ಬೇಡಿಕೆ ಬಂದಿರುವ ಕಾರಣದಿಂದ ದಿನೇ ದಿನೇ ಅಡಿಕೆ ಬೆಲೆಯಲ್ಲಿ ಏರಿಕೆ ಕಂಡಿದ್ದು, ಅಡಿಕೆ ಬೆಳೆಗಾರರಲ್ಲಿ ಮತ್ತೆ ಸಂತಸ ತಂದಿದೆ.ಕಳೆದ ಹತ್ತು ದಿನಗಳಿಂದ ಅಡಿಕೆ ಧಾರಣೆಯಲ್ಲಿ ದಿಢೀರ್ ಏರಿಕೆ ಕಂಡು ಬಂದಿದ್ದು, ಇನ್ನೂ ಏರಿಕೆಯಾಗುವ ಸಂಭವವಿದೆ.
ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಹಾಗೂ ಖಾಸಗಿ ವಲಯದಲ್ಲಿ ಅಡಿಕೆ ಖರೀದಿಗೆ ಪೈಪೋಟಿ ಆರಂಭವಾಗಿದ್ದು, ಒಂದೇ ತಿಂಗಳ ಅವಧಿಯಲ್ಲಿ ಹೊಸ ಅಡಿಕೆ ಹಾಗೂ ಹಳೆ ಅಡಿಕೆಗೆ ರೂ. 60 ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಜನವರಿ ಮೊದಲ ವಾರದಲ್ಲಿ ಹೊಸ ಅಡಿಕೆಗೆ ರೂ. 340 ಹಾಗೂ ಹಳೆ ಅಡಿಕೆಗೆ ರೂ. 410 ಧಾರಣೆ ಇದ್ದು, ಒಂದು ತಿಂಗಳ ಅಂತರದಲ್ಲಿ ಧಿಡೀರ್ ಬೆಲೆ ಏರಿಕೆಯಾಗಿರುವುದರಿಂದ ರೈತರು ಫುಲ್ ಖುಷಿಯಾಗಿದ್ದಾರೆ.