ನಿಟ್ಟಡೆ: ಇಲ್ಲಿಯ ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಫೆ.5 ರಿಂದ 6 ರವರೆಗೆ ನಡೆಯಲಿದ್ದು, ಇಂದು(ಫೆ.5) ಬೆಳಿಗ್ಗೆ ಶ್ರೀ ದುರ್ಗಾದೇವಿ ಗುಡಿಯಲ್ಲಿ ಚಂಡಿಕಾಯಾಗ, ಭಜನಾ ಕಾರ್ಯಕ್ರಮ, ವಿಶೇಷ ರಂಗಪೂಜೆ, ಮತ್ತು ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು.
ಮಧ್ಯಾಹ್ನ ಕ್ಷೇತ್ರದ ಪರಿವಾರ ದೈವಗಳಾದ ಮೈಸಂದಾಯ, ದುಗಲಾಯ, ಪಂಜುರ್ಲಿ, ಮೈಯಂತಿ, ಸನ್ಯಾಸಿ ಗುಳಿಗ, ಮಂತ್ರದೇವತೆ, ದೈವಗಳ ಗಗ್ಗರ ಸೇವೆ ನಡೆದು ನಂತರ ಭಕ್ತಾಧಿಗಳಿಗೆ ಸಾರ್ವಜನಿಕ ಅನ್ನಸಂತರ್ಪಣೆ, ನಡೆಯಿತು. ಜಾತ್ರಾ ಮಹೋತ್ಸವದಲ್ಲಿ ಊರ ಪರವೂರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಇಂದು ಸಂಜೆ 6ರಿಂದ ನವ ಗುಳಿಗಗಳ ವಿಶೇಷ ಗಗ್ಗರ ಸೇವೆ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ಫೆ. 6ರಂದು ಸಂಜೆ ಮಹಾಪೂಜೆ, ಪ್ರಸಾದ ವಿತರಣೆ, ‘ಶಿವದೂತೆ ಗುಳಿಗ’ ಎಂಬ ವಿಭಿನ್ನ ಶೈಲಿಯ ತುಳು ನಾಟಕ ಪ್ರದರ್ಶನಗೊಳ್ಳಲಿದೆ.