ಬೆಳ್ತಂಗಡಿ: ಬೆಳ್ತಂಗಡಿ ಅಬಕಾರಿ ವಲಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಪೇದೆಗಳಾದ ಸಯ್ಯದ್ ಶಬೀರ್ ಹಾಗೂ ಅಬ್ದುಲ್ ಹಮೀದ್ ರವರು ಅಬಕಾರಿ ಮುಖ್ಯ ಪೇದೆಗಳಾಗಿ ಪದೋನ್ನತಿ ಹೊಂದಿದ್ದು, ವರ್ಗಾವಣೆಗೊಳ್ಳುತ್ತಿರುವ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಫೆ. 4ರಂದು ಅಬಕಾರಿ ಕಛೇರಿಯಲ್ಲಿ ನಡೆಯಿತು.
ಅಬಕಾರಿ ನಿರೀಕ್ಷಕಿ ಸೌಮ್ಯಲತಾ, ಅಬಕಾರಿ ಕಾನ್ಸ್ಟೇಬಲ್ಗಳಾದ ಭೋಜ, ಶಿವಶಂಕರ್, ರವಿಚಂದ್ರ, ಕ್ಲರ್ಕ್ ಸಿದ್ದೇಶ್, ಅಬಕಾರಿ ವಾಹನ ಚಾಲಕ ನವೀನ್ ಉಪಸ್ಥಿತರಿದ್ದರು.