ನಾಲ್ಕೂರು: ಕಂಚಿನಡ್ಕ ಕ್ಷೇತ್ರದಲ್ಲಿ ಸಾರ್ವಜನಿಕ ಶನೀಶ್ವರ ಪೂಜೆ ನೂರಾರು ಭಕ್ತರು ಭಾಗಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಾಲ್ಕೂರು: ಶ್ರೀ ನಾಗಬ್ರಹ್ಮ ಮತ್ತು ಮೂಜುಲ್ನಾಯ ಬ್ರಹ್ಮಸ್ಥಾನ ಕಂಚಿನಡ್ಕದಲ್ಲಿ ವರ್ಷಾಂಪ್ರತಿ ನಡೆಯುವ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಹಾಗೂ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆಯು ನಡೆಯಿತು. ಪೂಜೆಯಲ್ಲಿ ಊರ ಪರವೂರ ನೂರಾರು ಭಕ್ತರು ಪಾಲ್ಗೊಂಡು ದರ್ಶನ ಪಡೆದರು.
ಬಳಿಕ ಪ್ರಸಾದ ವಿತರಣೆ, ಸಾರ್ವಜನಿಕ  ಅನ್ನಸಂತರ್ಪಣೆ  ನಡೆಯಿತು.

ಈ ಸಂದರ್ಭ ಕದ್ರಿ ಬಾಲಯಕ್ಷ ಕೂಟ ಮತ್ತು ಯಕ್ಷಕೂಟ ಇವರಿಂದ ಏಕಾದಶಿ ಶ್ರೀ ದೇವಿ ಮಹ್ಮಾತೆ ಯಕ್ಷಗಾನ ನಡೆಯಿತು. ಹಾಗೂ ಕದ್ರಿ ಬಾಲಯಕ್ಷ ಕೂಟದ ವತಿಯಿಂದ ನೀಡಲಾಗುವ ಕದ್ರಿ ಯಕ್ಷ ಸಮ್ಮಾನ್ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದ ನಾಲ್ಕೂರು ಬರಮೇಲು ಶ್ರೀಧರ ಭಟ್‌ರವರಿಗೆ ನೀಡಿ ಸನ್ಮಾನಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಭಟ್ ಉಜಿರೆ ಅಭಿನಂದಾನ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ಸೂರಿ ಕುಮೇರು ಗೋವಿಂದ ಭಟ್, ವಾಸುದೇವ ಭಟ್, ರಾಮಚಂದ್ರ ಎಲ್ಲೂರು ಕದ್ರಿ, ದಯಾನಂದ ಕೊಡಿಕ್ಕಲ್, ಪತ್ರಕರ್ತ ಜಿತೇಂದ್ರ ಕುಂದೇಶ್ವರ, ಕೃಷ್ಣರಾಜ್, ಕಂಚಿನಡ್ಕ ಕ್ಷೇತ್ರದ ಅಧ್ಯಕ್ಷ ದಯಾನಂದ ಶೆಟ್ಟಿ, ಕಾರ್ಯದರ್ಶಿ ಪ್ರಭಾಕರ ಪೂಜಾರಿ, ವಿಶ್ವನಾಥ ಹೊಳ್ಳ, ಹಾಗೂ ಯಕ್ಷಗಾನ ಕಲಾವಿದರು, ಊರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.