ನಾಪತ್ತೆಯಾಗಿದ್ದ ಗರ್ಡಾಡಿ ವ್ಯಕ್ತಿಯೋರ್ವರ ಮೃತದೇಹ ಓಡಿಲ್ನಾಳದ ಕುಲ್ಲುಂಜ ಕೆರೆಯಲ್ಲಿ ಪತ್ತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗರ್ಡಾಡಿ: ಇಲ್ಲಿಯ ಹಟ್ರಾಡಿ ನಿವಾಸಿ ಶ್ರೀನಿವಾಸ ಮೊಯ್ಲಿ(60.ವ) ಎಂಬವರು ಜ. 26 ರಿಂದ ಮನೆಯಿಂದ ಹೊರಟವರು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ನಾಪತ್ತೆಯಾಗಿದ್ದ ಅವರು ಓಡಿಲ್ನಾಳ ಗ್ರಾಮದ ಕುಲ್ಲುಂಜ ಎಂಬಲ್ಲಿಯ ಕೆರೆಯಲ್ಲಿ ಶವವಾಗಿ ಫೆ.3 ರಂದು ಪತ್ತೆಯಾಗಿದ್ದಾರೆ.
ಘಟನೆಯ ವಿವರ: ಗರ್ಡಾಡಿ ಗ್ರಾಮದ ಹಟ್ರಾಡಿಯ ಕೆರೆಕೋಡಿ ನಿವಾಸಿ ಬಾಬು ಮೊಯ್ಲಿ ಎಂಬವರ ಪುತ್ರರಾಗಿರುವ ಶ್ರೀನಿವಾಸ ರವರು ಜ.26 ರಂದು ಮನೆಯಿಂದ ಹೊರ ಹೋದವರು ಫೆ.3 ರ ವರೆಗೂ ಮರಳಿ ಬಾರದೆ ನಾಪತ್ತೆಯಾಗಿದ್ದರು. ವಿಪರೀತ ಅಮಲು ಪದಾರ್ಥ ಸೇವನೆ ಚಟ ಹೊಂದಿದ್ದ ಇವರು  ಮೂಲವ್ಯಾದಿ ಖಾಯಿಲೆಯಿಂದ ಬಳಲುತ್ತಿದ್ದರು. ಅಮಲು ಪದಾರ್ಥ ಸೇವಿಸಿ ಎಲ್ಲೆಂದರಲ್ಲಿ ಮಲಗುತ್ತಿದ್ದ ಇವರು ತಮ್ಮ ಪತ್ನಿ ಮಕ್ಕಳ ಮನೆಗೆ ಹೋಗದೆ ತಮ್ಮ ಸಹೋದರ ಶ್ರೀಧರ ರವರ ಮನೆಯಲ್ಲಿಯೇ ಇರುತ್ತಿದ್ದರು ಎಂದು ಮೃತರ ಸಹೋದರ  ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.
ಓಡಿಲ್ನಾಳ ಗ್ರಾಮದ ಕುಳ್ಳುಂಜ ನಾರಾಯಣ ಭಟ್ ರವರ ತೋಟದಲ್ಲಿರುವ ಕೆರೆಯಲ್ಲಿ ಫೆ.3 ರಂದು ಶ್ರೀನಿವಾಸ್ ಮೃತದೇಹ ಪತ್ತೆಯಾಗಿದ್ದು, ಶ್ರೀಧರ ರವರ ಪರಿಚಯಸ್ಥರಾದ ಚಂದ್ರಹಾಸ ಎಂಬವರು ಈ ಬಗ್ಗೆ ವಿಚಾರ ತಿಳಿಸಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಠಾಣಾ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.