ಬೆಳ್ತಂಗಡಿ; 17 ವರ್ಷಗಳ ಕಾಲ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ, ತಾಯ್ನಾಡಿಗೆ ಮರಳಿದ ಕಡಿರುದ್ಯಾವರದ ಯತೀಂದ್ರ ಹೆಚ್.ಜೆ ರಿಗೆ ಅಭಿನಂದನೆ ಮತ್ತು ಸ್ವಾಗತ ಕಾರ್ಯಕ್ರಮ ಮುಂಡಾಜೆಯ ಕಲಾಕುಂಚ ವಠಾರದಲ್ಲಿ ಫೆ. 4 ರಂದು ಜರುಗಿತು.
ಮುಂಡಾಜೆಯ ಪ್ರಗತಿಪರ ಕೃಷಿಕ ಮಚ್ಚಿಮಲೆ ಅನಂತ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಮೇಜರ್ ಎಂ.ವಿ ಭಟ್ ಮುಂಡಾಜೆ, ನಿವೃತ್ತ ಸೇನಾಧಿಕಾರಿ ಎಂ.ಆರ್ ಜೈನ್, ಕಡಿರುದ್ಯಾವರ ಗ್ರಾ.ಪಂ ಸದಸ್ಯರಾದ ಅಶೋಕ್ ಕುಮಾರ್, ರಜನಿ ರವಿಕುಮಾರ್, ಯತೀಂದ್ರ ರವರ ಮಾತಾಪಿತರಾದ ರಮಣಿ ಮತ್ತು ಜಗದೀಶ್ ಪೂಜಾರಿ ದಂಪತಿ, ಯತೀಂದ್ರರವರ ಪತ್ನಿ ಮತ್ತು ಮಕ್ಕಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಯತೀಂದ್ರ ರವರು ಸ್ವಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ ಬಳಿಕ ವೇಣೂರು ಐಟಿಐ ಯಲ್ಲಿ ಆಟೋಮೊಬೈಲ್ ಶಿಕ್ಷಣ ಪಡೆದಿದ್ದರು. ಮುಂಡಾಜೆಯ ಜಯರಾಂ ಕೆ ಅವರು ನಡೆಸುವ ಕಲಾಕುಂಚ ಕೇಂದ್ರದ ವಿದ್ಯಾರ್ಥಿಯೂ ಆಗಿದ್ದರು. ಈ ವೇಳೆ ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2004 ರಲ್ಲಿ ದೇಶ ಸೇವೆಗೆ ಅರ್ಹತೆ ಪಡೆದಿದ್ದರು.
ಸೇನೆಗೆ ಸೇರಿದ ಅವರು ಜಮ್ಮು ಕಾಶ್ಮೀರ, ಉತ್ತರಾಖಂಡ್, ಅಸ್ಸಾಂ,ರಾಜಸ್ಥಾನ, ದೆಹಲಿ, ಪಂಜಾಬ್ ಮತ್ತು ಬೆಂಗಳೂರು ಇಲ್ಲೆಲ್ಲಾ ಕರ್ತವ್ಯ ಸಲ್ಲಿಸಿ ಇದೀಗ ನಿವೃತ್ತ ರಾಗಿ ಸ್ವ ಗ್ರಾಮಕ್ಕೆ ಮರಳಿದ್ದಾರೆ.