ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ 46 ಗ್ರಾಮ ಪಂಚಾಯತುಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯನ್ನು ಈಗಾಗಲೇ ಚೀಟಿ ಎತ್ತಿ ಆಯ್ಕೆ ಮಾಡಲಾಗಿದ್ದು, ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣಾಧಿಕಾರಿಗಳನ್ನು ನೇಮಕಗೊಳಿಸಿ ದ.ಕ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ನೇಮಕಗೊಂಡ ಚುನಾವಣಾಧಿಕಾರಿಗಳಿಗೆ ಫೆ.3ರಂದು ತರಬೇತಿ ನೀಡಲಾಗಿದೆ. ಆಯಾ ಪಂಚಾಯತಕ್ಕೆ ನೇಮಕಗೊಂಡ ಚುನಾವಣಾಧಿಕಾರಿಗಳೇ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ದಿನವನ್ನು ನಿಗದಿಗೊಳಿಸಬೇಕಾಗಿದ್ದು, ಗ್ರಾಮ ಪಂಚಾಯತಿ ಸದಸ್ಯರಿಗೆ ಚುನಾವಣೆ ನಡೆಸುವ 7 ದಿನ ಮುಂಚಿತವಾಗಿ ಸೂಚನಾ ಪತ್ರವನ್ನು ಜಾರಿ ಮಾಡಬೇಕು. ಅಧ್ಯಕ್ಷ ಹಾಗೂ ಉಪಾಧ್ಯಕ್ಷತೆಗೆ ಸ್ಪರ್ಧೆ ಏರ್ಪಟ್ಟಲ್ಲಿ ಚುನಾವಣೆಯನ್ನು ಮತಪತ್ರದ ಮೂಲಕ ನಡೆಸಬೇಕು. ಚುನಾವಣೆಯನ್ನು ನಡೆಸುವ ದಿನಾಂಕದಂದು ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಬೇಕು. ಚುನಾವಣೆ ಪ್ರಕ್ರಿಯೆಗೆ ಸಂಬಂಧಪಟ್ಟ ಗ್ರಾ.ಪಂ ಪಿಡಿಒ ಮತ್ತು ಕಾರ್ಯದರ್ಶಿಯವರ ಸಹಕಾರ ಪಡೆದು ನಡವಳಿ ದಾಖಲಿಸಬೇಕು. ಕೋವಿಡ್-19ರ ನಿಯಮವನ್ನು ಖಡ್ಡಾಯವಾಗಿ ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಗ್ರಾ.ಪಂ ಹಾಗೂ ನೇಮಕಗೊಂಡ ಚುನಾವಣಾಧಿಕಾರಿಗಳು:
ನಾರಾವಿ, ಮರೋಡಿ- ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೆಸ್ಕಾಂ ಬೆಳ್ತಂಗಡಿ,
ಹೊಸಂಗಡಿ, ಕುಕ್ಕೇಡಿ- ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ,
ಕಾಶಿಪಟ್ಣ, ಸುಲ್ಕೇರಿ, ಅಂಡಿಂಜೆ- ಸಹಾಯಕ ನಿರ್ದೇಶಕರು ಪಶು ಸಂಗೋಪನಾ ಇಲಾಖೆ ಬೆಳ್ತಂಗಡಿ,
ಅಳದಂಗಡಿ, ಪಡಂಗಡಿ-ಸಹಾಯಕ ತೋಟಗಾರಿಕಾ ನಿರ್ದೇಶಕರು ರಾಜ್ಯವಲಯ ಮದ್ದಡ್ಕ,
ಬಳಂಜ, ಶಿರ್ಲಾಲು – ಪಶು ವೈದ್ಯಾಧಿಕಾರಿ ಪಶುಸಂಗೋಪನಾ ಇಲಾಖೆ ವೇಣೂರು,
ಮಾಲಾಡಿ, ಕುವೆಟ್ಟು – ಸಹಾಯಕ ತೋಟಗಾರಿಕಾ ನಿರ್ದೇಶಕರು ತೋಟಗಾರಿಕಾ ಇಲಾಖೆ ಬೆಳ್ತಂಗಡಿ.
ಮೇಲಂತಬೆಟ್ಟು, ಲಾಲ – ಸಹಾಯಕ ನಿರ್ದೇಶಕರು ಅಕ್ಷರದಾಸೋಹ ತಾ.ಪಂ ಬೆಳ್ತಂಗಡಿ,
ನಡ, ನಾವೂರು, ಇಂದಬೆಟ್ಟು – ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಬೆಳ್ತಂಗಡಿ,
ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ- ಸಹಾಯಕ ಲೆಕ್ಕಾಧಿಕಾರಿಗಳು ತಾ.ಪಂ ಬೆಳ್ತಂಗಡಿ,
ನೆರಿಯ, ಚಾರ್ಮಾಡಿ- ಪಶು ವೈದ್ಯಾಧಿಕಾರಿಗಳು ಪಶುಸಂಗೋಪನಾ ಇಲಾಖೆ ನೆರಿಯ,
ಮುಂಡಾಜೆ, ಕಲ್ಮಂಜ – ಸಹಾಯಕ ಕೃಷಿ ನಿರ್ದೇಶಕರು ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ,
ಉಜಿರೆ, ಮಡಂತ್ಯಾರು – ಪಶು ವೈದ್ಯಾಧಿಕಾರಿ ಪಶುಸಂಗೋಪನಾ ಇಲಾಖೆ ಉಜಿರೆ,
ಕೊಯ್ಯೂರು, ಕಳಿಯ – ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಬೆಳ್ತಂಗಡಿ
ಮಚ್ಚಿನ, ತಣ್ಣೀರುಪಂತ – ವಿಸ್ತರಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಳ್ತಂಗಡಿ,
ಬಾರ್ಯ, ತೆಕ್ಕಾರು – ಸಹಾಯಕ ಕೃಷಿ ನಿರ್ದೇಶಕರು ಕೃಷಿ ಇಲಾಖೆ ಬೆಳ್ತಂಗಡಿ,
ಇಳಂತಿಲ, ಕಣಿಯೂರು, ಬಂದಾರು- ಪಶುವೈದ್ಯಾಧಿಕಾರಿ ಪಶು ಸಂಗೋಪನಾ ಇಲಾಖೆ ಉಜಿರೆ,
ಬೆಳಾಲು, ಪುದುವೆಟ್ಟು, ಶಿಶಿಲ – ಸಹಾಯಕ ನಿರ್ದೇಶಕರು ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆ ಬೆಳ್ತಂಗಡಿ,
ಪಟ್ರಮೆ, ಧರ್ಮಸ್ಥಳ, ಕೊಕ್ಕಡ – ಕಾರ್ಯದರ್ಶಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬೆಳ್ತಂಗಡಿ
ನಿಡ್ಲೆ, ಕಳೆಂಜ – ಸಹಾಯಕ ಕೃಷಿ ನಿರ್ದೇಶಕರು ರೈತ ಸಂಪರ್ಕ ಕೇಂದ್ರ ಕೊಕ್ಕಡ,
ಶಿಬಾಜೆ, ಅರಸಿನಮಕ್ಕಿ – ಜಾನುವಾರು ಅಭಿವೃದ್ಧಿ ಅಧಿಕಾರಿ ಬೆಳ್ತಂಗಡಿ.