ಪಡಂಗಡಿ: ಇಲ್ಲಿಯ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಕ್ಷೇತ್ರದ ತಂತ್ರಿಗಳಾದ ಉದಯ ಪಾಂಗಣ್ಣಯರವರ ನೇತೃತ್ವದಲ್ಲಿ, ಪ್ರಧಾನ ಅರ್ಚಕ ರಘರಾಮ್ ಭಟ್ ಮಠ ಅವರ ಉಪಸ್ಥಿತಿಯಲ್ಲಿ, ರಾಘವೇಂದ್ರ ಭಟ್ ಮಠ ರವರ ಪೂಜಾ ವಿಧಿ ವಿಧಾನಗಳೊಂದಿಗೆ ಫೆ 2 ರಿಂದ 4 ರ ವರೆಗೆ ಅತ್ಯಂತ ಸರಳವಾಗಿ ಜರಗಿತು.
ಫೆ.2 ರಂದು ದೇವತಾ ಪ್ರಾರ್ಥನೆ ಪುಣ್ಯಹವಾಚನ ಉಗ್ರಾಣ ಮುಹೂರ್ತ, ತೋರಣ ಮುಹೂರ್ತ, ಗಣಯಾಗ ಶತರುದ್ರಾಭಿಷೇಕ, ಮಹಾಪೂಜೆ ನಡೆದು ಸಂಜೆ ಹೊರೆಕಾಣಿಕೆ, ವಾಸ್ತು ಬಲಿ, ರಾಕ್ಷೋಘ್ನ ಸುದರ್ಶನ ಹೋಮ, ದುರ್ಗಾಪೂಜೆ, ಕಲಶಾಧಿವಾಶ ದುರ್ಗಾಪೂಜೆ, ಮಹಾಪೂಜೆ ಜರಗಿತು.
ಫೆ.3ರಂದು ಕಲಶ ಪ್ರಧಾನ ಹೋಮ, ನಾಗ ದೇವರ ಕಲಶ ತಂಬಿಲ, ರುದ್ರಹೋಮ. ಮಹಾ ಪೂಜೆ, ಧ್ವಜರೋಹಣ, ದೇವರ ಬಲಿ ಉತ್ಸವ, ಮಹಾಪೂಜೆ , ನಡೆದು ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಪಡಂಗಡಿ, ಕುವೆಟ್ಟು, ಓಡಿಲ್ನಾಳ, ಸೊಣಂದೂರು ಗ್ರಾಮದ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.