ಧರ್ಮಸ್ಥಳ ರತ್ನಗಿರಿಯಲ್ಲಿ ಭಗವಾನ್ ಶ್ರೀ ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವಿವಿಧ ದ್ರವ್ಯಗಳಿಂದ ಶ್ರೀ ಬಾಹುಬಲಿ ಮೂರ್ತಿಗೆ ಪಾದಾಭೀಷೇಕ

ಧರ್ಮಸ್ಥಳದ ರತ್ನಗಿರಿಯಲ್ಲಿ ಭಗವಾನ್ ಶ್ರೀ ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವ ಹಾಗೂ 39ನೇ ವರ್ಧಂತ್ಯುತ್ಸವದ ಅಂಗವಾಗಿ ತೋರಣ ಮುಹೂರ್ತ, ವಿಮಾನ ಶುದ್ಧಿ, ನಾಂದಿಮಂಗಲ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದು, ಫೆ.3 ರಂದು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಪಾದಭಿಷೇಕ ನಡೆಯಿತು.

ಧರ್ಮಸ್ಥಳದ ಧರ್ಮಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಹಾಗೂ ಜೈನಮಠದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಬೆಳ್ಳಗ್ಗೆ ಆಗ್ರೋದಕ ಮೆರವಣಿಗೆ, ಬಳಿಕ 216 ಕಲಶಗಳಿಂದ ಶ್ರೀ ಸ್ವಾಮಿಯ ಪಾದಾಭಿಷೇಕ ನಡೆಯಿತು.

ಇನ್ನೂ ವಿವಿಧ ದ್ರವ್ಯಗಳಾದ ಎಳನೀರು, ಅರಶಿನ, ಶ್ರೀಗಂಧ, ಚಂದನ, ಕ್ಷೀರ, ಇಕ್ಷು ರಸ, ಅಕ್ಕಿ ಹಿಟ್ಟು, ಹಾಗೂ ಮುಂತಾದ ದ್ಯವ್ಯಗಳಿಂದ ಪಾದಾಭೀಷೇಕವನ್ನು ಮಾಡಲಾಯಿತು, ಬಳಿಕ ಶ್ರೀ ಸ್ವಾಮಿಯ ಪಾದಕಮಲಗಳಿಗೆ ವೀರೇಂದ್ರ ಹೆಗ್ಗಡೆ ಕುಟುಂಬದವರು ಪುಷ್ಪಗಳಿಂದ ಅರ್ಚನೆಯನ್ನು ಸಲ್ಲಿಸಿ, ಶ್ರೀ ಬಾಹುಬಲಿ ಸ್ವಾಮಿಯ ಮಹಾಮಂಗಳಾರತಿ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಹೇಮಾವತಿ ಹೆಗ್ಗಡೆ, ಹರ್ಷೇಂದ್ರ ಹೆಗ್ಗಡೆ, ಹಾಗೂ ಕುಟುಂಬಸ್ಥರು, ಧರ್ಮ ಬಂಧುಗಳು, ಸಾರ್ವಜನಿಕರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.